- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಣ್ಣಿನಿಂದ ಗಿಡವಾಗಿ ಬೆಳೆಯೋ ಗಣೇಶ… ಶಾಸಕರಿಂದ ಪರಿಸರಸ್ನೇಹಿ ಗಣಪನ ಬಗ್ಗೆ ಜಾಗೃತಿ

ಬೆಂಗಳೂರು: ಎಲ್ಲರೂ ಮಣ್ಣಿನ ಗಣಪನನ್ನೇ ಬಳಸಿ, ಕೆರೆ ಪರಿಸರ ರಕ್ಷಿಸಿ ಅಂತಾ ಭಾಷಣ ಮಾಡೋದನ್ನು ಕೇಳಿರುತ್ತೇವೆ. ಆದ್ರೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಮಾತ್ರ ಒಂದು ಹೆಜ್ಜೆ ಮುಂದುವರಿದು ಗಣೇಶ ವಿಸರ್ಜನೆ ಬಳಿಕ ಅದರಿಂದಲೇ ಗಿಡ ಮರ ಬೆಳೆಸೋ ಪ್ಲಾನ್ ಕೂಡಾ ಮಾಡಿದ್ದಾರೆ.

ಹೌದು, ಕಲರ್ ಕಲರ್ ಆಗಿ ಕಾಣಿಸುತ್ತಾ ಪರಿಸರದ ಸೊಬಗನ್ನೇ ಹಾಳು ಮಾಡುವ ಪಿಒಪಿ ಗಣೇಶನ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಿ.. ಜೇಡಿ ಮಣ್ಣಿನಿಂದ ಮಾಡಿದ ಈ ಹಸಿರು ಗಣಪನನ್ನು ಕೂರಿಸಿ ನೀವು ಪರಿಸರ ಸ್ನೇಹಿಗಳಾಗಿ. ನೀವು ಪೂಜಿಸೋ ಈ ಗಣೇಶ ನಿಮ್ಮ ಮನೆಯಲ್ಲಿ ಗಿಡವಾಗಿ ಮರವಾಗಿ ಸದಾ ಇರ್ತಾನೆ ಅನ್ನೋ ಸಂದೇಶವನ್ನು ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ ಅವರ ಮಗಳು ಸೌಮ್ಯಾ ರೆಡ್ಡಿ ಜಾಗೃತಿ ಸಂದೇಶ ಸಾರಿದ್ದಾರೆ.

ಕಳೆದ ವಾರವಷ್ಟೆ ರ್ಯಾಲಿ ಮೂಲಕ ಪಿಒಪಿ ಗಣೇಶನನ್ನು ಕೂರಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದ ಶಾಸಕಿ ಸೌಮ್ಯ ರೆಡ್ಡಿ ಇವತ್ತು ಜೆಪಿ ನಗರದಲ್ಲಿ ಮೂರು ಸಾವಿರ ಗ್ರೀನ್ ಗಣೇಶನನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂ

ಗ್ರೀನ್ ಗಣೇಶನ ಮೂರ್ತಿಯನ್ನು ಜೇಡಿ ಮಣ್ಣಿನಿಂದ ಮಾಡಿದ್ದು ಹುಣಸೆ ಬೀಜ ಹಾಗೂ ತುಳಸಿ ಬೀಜಗಳನ್ನು ಹಾಕಲಾಗಿದೆಯಂತೆ. ಪೂಜೆ ನಂತರ ನಿಮ್ಮ ಮನೆ ಪಾಟ್ಲ್ಲಿ ಗಣೇಶನನ್ನು ವಿರ್ಸಜಿಸಿದ್ರೆ ಎರಡೇ ವಾರದಲ್ಲಿ ಗಿಡದ ರೂಪದಲ್ಲಿ ನಿಮ್ಮ ಗಣೇಶ ಮನೆಗೆ ವಾಪಸ್ ಆಗಲಿದ್ದಾನೆ.

ಇನ್ನು, ಸಾರ್ವಜನಿಕರು ಬಹಳ ಸಂಭ್ರಮದಿಂದಲೇ ತಮಗೆ ಇಷ್ಟವಾದ ಗ್ರೀನ್ ಗಣೇಶನನ್ನು ಆಯ್ಕೆ ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋದ್ರು. ಅಷ್ಟೇ ಅಲ್ಲದೆ ಮಣ್ಣಿನಿಂದ ಗಿಡವಾಗೋ ಈ ಗಣೇಶನ ಬಗ್ಗೆ ಬಹಳ ಕುತುಹಲವಿರೋದಾಗಿ ಹೇಳಿದ್ರು.