‘ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯೇ ನಿಜವಾದ ನೇತೃತ್ವನ್ನು ಮಾಡಬಹುದು’

3:31 PM, Monday, September 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

shambuಝಾರ್ಕಂಡ್: ‘ಯಥಾ ರಾಜಾ ತಥಾ ಪ್ರಜಾ’, ಎಂಬ ಒಂದು ಉಕ್ತಿ ಇದೆ. ಅಯೋಗ್ಯ ನಾಯಕನಿಂದ ಸಮಾಜದ ಸ್ಥಿತಿ ಹಾಳಾಗುತ್ತದೆ, ಎಂಬುದನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಅದೇ ರೀತಿ ಒಳ್ಳೆಯ ನಾಯಕನಿಂದ ಕಲ್ಯಾಣವಾಗಿ ಅಲ್ಲಿ ಶಾಂತಿ ನೆಲೆಸುತ್ತದೆ. ನಿಜವಾದ ನೇತೃತ್ವವು ಕೇವಲ ಉನ್ನತ ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಳ್ಳುವುದರಿಂದಲೇ ಸಾಧ್ಯವಾಗುತ್ತದೆ. ಆಧುನಿಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಇದರ ಅಧ್ಯಯನ ಮಾಡುವ ಉದ್ದೇಶದಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಸಮಿಕ್ಷೆ ನಡೆಸಲಾಯಿತು.

ಇದರಲ್ಲಿ ವ್ಯಕ್ತಿಯಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆ ಹಾಗೂ ಅದರ ಪ್ರಭಾವಲಯವನ್ನು ಅಳೆಯುವ ‘ಯೂಟಿಎಸ್’ (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಎಂಬ ಉಪಕರಣದ ಮೂಲಕ ಜಗತ್ತಿನ ೪ ಪ್ರಸಿದ್ಧ ನಾಯಕರಿಂದ ಪ್ರಕ್ಷೇಪಿತವಾಗಿವ ಸ್ಪಂದನಗಳ ಅಧ್ಯಯನ ಮಾಡಲಾಯಿತು. ಈ ಸಂಶೋಧನೆಯನ್ನಾಧರಿಸಿ ‘ನಿಜವಾದ ನೇತೃತ್ವವನ್ನು ಉನ್ನತ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯೇ ಮಾಡಬಲ್ಲರು’, ಎಂಬ ಶೋಧನಿಬಂಧವನ್ನು ಓಡಿಶಾದ ಪುರಿಯಲ್ಲಿ ಸಪ್ಟೆಂಬರ್ 16 ರಂದು ‘ಅರ್ಥಶಾಸ್ತ್ರ, ವ್ಯವಸಾಯ ಮತ್ತು ಸಮಾಜಶಾಸ್ತ್ರ’ ಈ ವಿಷಯದಲ್ಲಿನ 5 ನೇ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಲಾಯಿತು.

ICISDSMT IIRAJ Researchers Forum (WWPE Trust), Institute of Research and Publication (IResearchPub) ಇವು ಈ ಪರಿಷತ್ತಿನ ಆಯೋಜಕರಾಗಿದ್ದರು. ಈ ಶೋಧನಿಬಂದದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರಾಗಿದ್ದು ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಸಹಲೇಖಕರಾಗಿದ್ದಾರೆ.

ಪ್ರಸಕ್ತ ಶೋಧನಿಬಂಧವನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಂಭೂ ಗವಾರೆರವರು ಮಂಡಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಆಯೋಜಕರು ಶ್ರೀ. ಗವಾರೆಯವರಿಗೆ ಶೋಧನಿಬಂಧ ಒಳ್ಳೆಯದಾಗಿ ಮಂಡಿಸಿದ ಬಗ್ಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೇ ಅವರಿಗೆ ಆಯ್ಕೆ ಸಮಿತಿಯ ಸದಸ್ಯನಾಗಲು ವಿನಂತಿಸಿದರು.

ಶೋಧನಿಬಂಧದ ಪರೀಕ್ಷೆಗಾಗಿ ಆಯ್ಕೆ ಮಾಡಿದ 4 ನಾಯಕರಲ್ಲಿ ಒಬ್ಬ ಸರ್ವಾಧಿಕಾರಿಯಾಗಿದ್ದು, ಎರಡನೇಯವರು ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಇಓ), ಮೂರನೇಯವರು ಒಂದು ದೇಶದ ರಾಜಕೀಯ ಮುಖ್ಯಸ್ಥ ಮತ್ತು ನಾಲ್ಕನೇಯವರು ಉನ್ನತ ಆಧ್ಯಾತ್ಮಿಕ ಮಟ್ಟವಿರುವ ಸಂತರಾಗಿದ್ದರು. ಈ ಪರೀಕ್ಷೆಯ ನಿರೀಕ್ಷಣೆಯ ವಿಶ್ಲೇಷಣೆಯನ್ನು ಮಾಡುವಾಗ ಗಮನಕ್ಕೆ ಬಂದಿತೇನೆಂದರೆ, ಸರ್ವಾಧಿಕಾರಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಇವರಿಂದ ತುಂಬ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿತ್ತು.

ಸರ್ವಾಧಿಕಾರಿಯಿಂದ ನಕಾರಾತ್ಮಕ ಸ್ಪಂದನ ಬರುವುದನ್ನು ತಿಳಿಯಬಹುದು; ಆದರೆ ಒಬ್ಬ ಖ್ಯಾತ ಮುಖ್ಯ ಕಾರ್ಯಕಾರಿ ಅಧಿಕಾರಿಯಿಂದ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು ಆಶ್ಚರ್ಯಕರವೆನಿಸುತ್ತದೆ. ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕತೆ ಪ್ರಕ್ಷೇಪಿಸುವ ಸಂತರನ್ನು ಬಿಟ್ಟರೆ ಬೇರೆ ಯಾರಲ್ಲಿಯೂ ಸಕಾರಾತ್ಮಕ ಊರ್ಜೆ ಗಮನಕ್ಕೆ ಬರಲಿಲ್ಲ.

ಪ್ರಭಾವಲಯದ ನಿರೀಕ್ಷಣೆಯಲ್ಲಿಯೂ ಸಂತರ ಪ್ರಭಾವಲಯವೇ ಎಲ್ಲಕ್ಕಿಂತ ಹೆಚ್ಚು ಇರುವುದು ಗಮನಕ್ಕೆ ಬಂದಿತು. ಶ್ರೀ. ಶಂಭೂ ಗವಾರೆಯವರು ಮುಂದೆ ಮಾತನಾಡುತ್ತಾ, ಉಪಕರಣಗಳ ಮಾಧ್ಯಮದಿಂದ ಮಾಡಿದ ಸಂಶೋಧನೆಯಿಂದ ಮೇಲಿನ ನಿಷ್ಕರ್ಷ ಗಮನಕ್ಕೆ ಬಂದಿತು.

ಅಲ್ಲದೇ ಸೂಕ್ಷ್ಮ ಸ್ಪಂದನಶಾಸ್ತ್ರದ ಅಧ್ಯಯನ ಮಾಡುವ ಅಧ್ಯಯನಕಾರರು ಈ ನಾಲ್ಕೂ ನಾಯಕರ ಅಧ್ಯಯನ ಮಾಡಿದಾಗ ಸರ್ವಾಧೀಕಾರಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿಯವರು ನಕಾರಾತ್ಮಕ ಸ್ಪಂದನಗಳ ಅಧೀನವಾಗಿರುವುದು ಗಮನಕ್ಕೆ ಬಂದಿತು. ರಾಜಕೀಯ ನಾಯಕ ನಕಾರಾತ್ಮಕ ಸ್ಪಂದನಗಳಿಗೆ ಅಧೀನನಾಗಿಲ್ಲದಿದ್ದರೂ ಆ ನಾಯಕನ ಮೇಲೆ ಆ ಸ್ಪಂದನಗಳ ಪ್ರಭಾವವಿತ್ತು. ಸಂತರಲ್ಲಿನ ಸಕಾರಾತ್ಮಕತೆಯ ಪ್ರಮಾಣ ಎಷ್ಟಿತ್ತೆಂದರೆ ಅವರ ಮೇಲಿನ ನಕಾರಾತ್ಮಕ ಸ್ಪಂದನಗಳಿಂದ ಯಾವುದೇ ಪರಿಣಾಮವಾಗುತ್ತಿರಲಿಲ್ಲ.

ನಿತ್ಯ ಉಪಾಸನೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಳಿಗಾಗಿ ಸತತ ಪ್ರಯತ್ನಿಸುತ್ತಿರುವುದು, ವಿಚಾರ ಮತ್ತು ಕೃತಿಗಳನ್ನು ಹೆಚ್ಚೆಚ್ಚು ಆಧ್ಯಾತ್ಮಿಕದೃಷ್ಟಿಯಲ್ಲಿ ಸಕಾರಾತ್ಮಕವನ್ನಾಗಿಸುವ ಸಂಸ್ಕೃತಿ ಮತ್ತು ಧರ್ಮಾಧಿಷ್ಠಿತ ನಿರ್ಣಯಪ್ರಕ್ರಿಯೆ ಇವುಗಳು ಆಧ್ಯಾತ್ಮಿಕ ನೇತೃತ್ವವನ್ನು ವಿಕಸಿತಗೊಳಿಸಬಲ್ಲದು. ಈ ಅಂಶದಿಂದ ಸ್ಪಷ್ಟವಾಗುವುದೇನೆಂದರೆ ಮೇಲಿನ ಅಂಶಗಳಂತೆ ಮಾಡುವುದರಿಂದ ವ್ಯಕ್ತಿಯು ಆದರ್ಶ ನಾಗರಿಕನಾಗಬಹುದು. ಇಂತಹ ಆದರ್ಶ ನಾಯಕನು ಸಮಾಜದಲ್ಲಿ ನಾವಿನ್ಯಪೂರ್ಣವಾಗಿ ಮತ್ತು ಶಾಶ್ವತ ಸಕಾರಾತ್ಮಕ ಪರಿವರ್ತನೆಯನ್ನು ಮಾಡಬಲ್ಲನು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English