ಪತಿಯೊಂದಿಗೆ ಮುನಿಸು: ಹಣ ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆ

2:41 PM, Friday, September 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

escapedಮಂಗಳೂರು: ಪತಿಯೊಂದಿಗೆ ಮುನಿಸಿಕೊಂಡ ನವವಿವಾಹಿತೆ ನಗದು ಹಣ ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಘಟನೆ ಪುತ್ತೂರು ನಗರದ ಹಾರಾಡಿಯಲ್ಲಿ ನಡೆದಿದೆ.

ಪುತ್ತೂರು ಹಾರಾಡಿ ಕಾಂಪೌಂಡ್ ನಿವಾಸಿಯ ಪತ್ನಿ ನಾಪತ್ತೆಯಾದ ನವವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ನಡೆದಿತ್ತು. ವಿವಾಹವಾದ ಆರಂಭದಲ್ಲಿ ಈ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ಕ್ಷುಲ್ಲಕ ಕಾರಣಕ್ಕೆ ಪತಿ ಜೊತೆ ಮುನಿಸಿಕೊಂಡಿದ್ದ ಯುವತಿ ಮನೆಯಲ್ಲಿ ಪ್ರತ್ಯೇಕ ರೂಂನಲ್ಲೇ ಒಂಟಿಯಾಗಿ ಇರುತ್ತಿದ್ದರು .

ಕಳೆದ ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಪತ್ನಿ ರಾತ್ರಿ ಸುಮಾರು 11.45ರ ವೇಳೆಗೆ ನಾಪತ್ತೆಯಾಗಿರುವುದು ಪತಿಯ ಗಮನಕ್ಕೆ ಬಂದಿದೆ.

ತಾನು ಮಲಗುವ ಬೆಡ್ ಮೇಲೆ ದಿಂಬುಗಳನ್ನಿಟ್ಟು ಅದರ ಮೇಲೆ ಬೆಡ್ ಶೀಟ್ ಹಾಕಿ ತಾನು ಮಲಗಿರುವ ಹಾಗೆ ಕಾಣುವಂತೆ ಮಾಡಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪತಿ ದೂರಿದ್ದಾರೆ.

ಬಳಿಕ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ಆಕೆಯ ತವರು ಮನೆಯವರಿಗೆ ಹಾಗೂ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪತಿ ಬುಧವಾರ ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಮನೆಯಲ್ಲಿದ್ದ 13 ಸಾವಿರ ನಗದು ಹಣ ಹಾಗೂ 12 ಪವನ್ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾದ ಬಳಿಕ ನವವಿವಾಹಿತೆ ಬಳಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English