- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ: ನಟ ದುನಿಯಾ ವಿಜಯ್ ಬಂಧನ

duniya-vijay [1]ಬೆಂಗಳೂರು: ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಮಾರುತಿಗೌಡ ಎಂಬವರನ್ನು ಅಪಹರಿಸಿರುವ ನಟ ದುನಿಯಾ ವಿಜಯ್ ಹಾಗೂ ಅವರ ತಂಡ, ಮಾರುತಿಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪಾನಿಪುರಿ ಕಿಟ್ಟಿ ನೀಡಿದ ದೂರಿನಡಿಯಲ್ಲಿ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ.

ದುನಿಯಾ ವಿಜಯ್‌ ಹಾಗೂ ಅವರ ತಂಡದವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಿಸ್ಟರ್ ಬೆಂಗಳೂರು ಸ್ಪರ್ಧೆ ನೋಡಲು ಬಂದಿದ್ದ ನನ್ನ ಅಣ್ಣನ ಮಗ ಜಿಮ್ ಟ್ರೈನರ್ ಆಗಿರುವ ಮಾರುತಿ ಮಾರುತಿಗೌಡನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪಾನಿಪುರಿ ಕಿಟ್ಟಿ ಭಾನುವಾರ ರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇಸ್‌ ದಾಖಲಿಸಿಕೊಂಡ ಪೊಲೀಸರು ದುನಿಯಾ ವಿಜಯ್‌ಗೆ ಕರೆ ಮಾಡಿ ಮಾರುತಿಗೌಡನ ಜತೆ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಹೇಳಿದರು.

duniya-vijay-2 [2]ಪೊಲೀಸ್‌ ಠಾಣೆಗೆ ಬಂದ ದುನಿಯಾ ವಿಜಯ್‌ ಹಾಗೂ ಪಾನಿಪುರಿ ಕಿಟ್ಟಿ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ, ಪರಿಸ್ಥಿತಿ ನಿಯಂತ್ರಿಸಲು ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಯ್ತು. ಪೊಲೀಸ್‌ ಠಾಣೆಯಲ್ಲಿಯಲ್ಲೂ ದರ್ಪ ಮೆರೆದ ವಿಜಯ್‌ನನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ದುನಿಯಾ ವಿಜಯ್ ವಿರುದ್ಧ ಕಿಡ್ನಾಪ್ , ಹಲ್ಲೆ, ಕೊಲೆ ಜೀವ ಬೆದರಿಕೆ, ಐಪಿಸಿ ಸೆಕ್ಷನ್ 365, 342 , 325, 506 , ಪ್ರಕರಣ ದಾಖಲಾಗಿದ್ದು, ದುನಿಯಾ ವಿಜಯ್‌ ಹಾಗೂ ಸಹಚರರನ್ನು ಪರಪ್ಪನ ಅಗ್ರಹಾರಕ್ಕೆ ಕರೆತರಲಾಗುವುದು. ವಿಜಿ ಮೇಲೆ ದಾಖಲಾಗಿರುವ ಆರೋಪಗಳು ಸಾಬೀತಾದಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾಗುವ ಸಾಧ್ಯತೆ ಇದೆ.

duniya-vijay-3 [3]ನಿವೃತ್ತ ಯೋಧನಿಗೆ ಅವಾಜ್ ಹಾಕಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ದುನಿಯಾ ವಿಜಯ್ ಮೇಲೆ ಕೇಳಿ ಬಂದಿದೆ. ದುನಿಯಾ ವಿಜಿ ಬಾಮೈದ ಕಿರಣ್ ನಿವೃತ್ತ ಯೋಧ ವೆಂಕಟೇಶ ಬಳಿ ನಾಲ್ಕು ಲಕ್ಷ ಹಣ ತಗೊಂಡು, ಸಾಲ ಮರುಪಾವತಿ ಮಾಡದೆ ಸತಾಯಿಸುತ್ತಿದ್ದರು. ಈ ಸಂಬಂಧ ವೆಂಕಟೇಶ್‌ ದುನಿಯಾ ವಿಜಯ್‌ಗೆ ತಿಳಿಸಲು ಹೋದಾಗ ‘ಇನ್ನೊಂದು ಸಾರಿ ನನ್ನ ಮನೆ ಬಾಗಿಲಿಗೆ ಬಂದ್ರೆ ಕೊಲೆ ಮಾಡುತ್ತೇನೆ’ಎಂದು ಬೆದರಿಕೆ ಹಾಕಿ, ಒದೆಯಲು ಹೋಗಿದ್ದರು. ಇದೀಗ ವಿಜಯ್‌ ದರ್ಪದ ವರ್ತನೆಯ ವಿರುದ್ಧ ದೂರು ನೀಡಲು ವೆಂಕಟೇಶ್ ನಿರ್ಧಾರ ಮಾಡಿದ್ದಾರೆ.

ಜನವರಿ 18, 2013ರಲ್ಲಿ ಮೊದಲ ಪತ್ನಿ ನಾಗರತ್ನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದುನಿಯಾ ವಿಜಯ್‌ ಮೇಲೆ ದೂರು ದಾಖಲಾಗಿತ್ತು.

ಮೇ 31, 2018ರಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದ ಮೇರೆಗೆ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ