ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ: ಪಾನಿಪುರಿ ಕಿಟ್ಟಿ

2:06 PM, Monday, September 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

panipuri-kittyಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಟೀಂನಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ ಎಂದು ಪಾನಿಪುರಿ ಕಿಟ್ಟಿ ತಿಳಿಸಿದ್ದಾರೆ.

ತುಟಿಗೆ 14 ಹೊಲಿಗೆ ಹಾಕಿದರೂ ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊದಿಕೊಂಡಿದೆ. ರಾತ್ರಿಪೂರ್ತಿ ಕತ್ತು ನೋವು‌ ಎನ್ನುತ್ತಿದ್ದ. ಎರಡೂ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಎಂದು ಹೇಳಿದ್ದಾರೆ.

ಏನೇ ತಿಂದರೂ ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ.‌ ತುಟಿಗೆ ಗಾಯ ಸಂಬಂಧ ಸಿಟಿ ಸ್ಕ್ಯಾನ್ ರಿಪೋರ್ಟ್ಗಾಗಿ ಕಾಯುತ್ತಿದ್ದೇವೆ. ನಾವು ಡಿಸಿಎಂ ಭೇಟಿಗೆ ಬಂದಿದ್ದೇವೆ. ಈಗ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English