- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ: ಮೂವರ ಬಂಧನ

arrested [1]ಮಂಗಳೂರು: ನಗರದ ಕುಂಟಿಕಾನ್ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಗುರುಪುರ ಕೈಕಂಬ ಕಿನ್ನಿ ಕಂಬಳ ಹೌಸ್, ಚರ್ಚ್ ರಸ್ತೆಯ ನಿವಾಸಿ ಮಹಮದ್ ಶಾಕೀರ್ (23), ಪಂಜಿಮೊಗರು ಶ್ರೀನಿವಾಸ ಮೆಡಿಕಲ್ ಶಾಪ್ ಹಿಂಬದಿಯ ಮೋಯ್ದೀನ್ ಜುಮ್ಮಾ ಮಸೀದಿ ಬಳಿಯ ನಿವಾಸಿ ನದೀಮ್ (26), ಕಾವೂರು ಶಾಂತಿನಗರ ಅಲ್ ಫಾರೂಕ್ ಮಸೀದಿ ಬಳಿಯ ಸಫ್ವಾನ್ ಮಂಜಿಲ್ ನಿವಾಸಿ ಫಕ್ರುದ್ದೀನ್ (26) ಬಂಧಿತ ಆರೋಪಿಗಳು.

ಬಂಧಿತರಿಂದ ಒಟ್ಟು 07 ಗ್ರಾಂ ಗಾಂಜಾ, 20 ಗ್ರಾಂ ತೂಕದ ಎಂಡಿಎಂಎ ಎಂಬ ಮಾದಕ ವಸ್ತು, ಮೂರು ಮೊಬೈಲ್ ಫೋನ್ ಮತ್ತು 74025 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ