ಮಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದುನಿಯಾ ವಿಜಯ್ ಹಾಗೂ ಇತರ ಮೂವರು ಆರೋಪಿಗಳಿಗೆ ಜಾಮೀನು ರದ್ದಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಪರ ವಕೀಲರು ಜಾಮೀನು ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಇನ್ನು ಟಿವಿ ನೋಡಬೇಕಾಗಿ ಕೋರಿಕೊಂಡಿದ್ದಕ್ಕೆ ಜೈಲು ನಿಯಮಾನುಸಾರ ವಿಜಯ್ಗೆ ಟಿವಿ ನೋಡಲು ಅವಕಾಶ ನೀಡಲಾಗಿತ್ತು. ಜಾಮೀನು ಅರ್ಜಿ ತಿರಸ್ಕೃತ ಆದೇಶ ಹೊರಬೀಳುತ್ತಿದ್ದಂತೆ ಬೇಸರಗೊಂಡ ವಿಜಯ್ ಮೌನಕ್ಕೆ ಶರಣಾಗಿದ್ದಾರೆ ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ.
Click this button or press Ctrl+G to toggle between Kannada and English