- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಗೆಲುವು: 7ನೇ ಬಾರಿ ಚಾಂಪಿಯನ್​ ಪಟ್ಟ..!

 

indai [1]ದುಬೈ: ಯುಎಇನಲ್ಲಿ ನಡೆದ 14ನೇ ಆವೃತ್ತಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 3ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಬಲಗೈ ಓಪನರ್ ಲಿಟನ್ ದಾಸ್ ಅವರ ಚೊಚ್ಚಲ ಶತಕದ (121) ನೇರವಿನಿಂದ 48.3 ಓವರ್‌ಗಳಲ್ಲೇ 222 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಲಾಸ್ಟ್ ಓವರ್ನ ಕೊನೆ ಎಸೆತದಲ್ಲಿ ಗೆಲುವು ಪಡೆದರು.

ಭಾರತದ ಪರ ಮಿಂಚಿದ ಕುಲ್ದೀಪ್ ಯಾದವ್ 3ವಿಕೆಟ್, ಕೇದಾರ್ ಜಾಧವ್ 2ವಿಕೆಟ್ ಪಡೆದುಕೊಂಡರೆ ಜಸ್ಪ್ರೀತ್ ಬೂಮ್ರಾ ಹಾಗೂ ಯಜುವೇಂದ್ರ ಚಹಾಲ್ ತಲಾ 1ವಿಕೆಟ್ ಪಡೆದುಕೊಂಡರು.

indai-2 [2]223ರನ್ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. 46 ರನ್ಗಳಿಸುವಷ್ಟರಲ್ಲಿ ಶಿಖರ್ ಧವನ್ (15) ಹಾಗೂ ಅಂಬಟಿ ರಾಯುಡು (2) ವಿಕೆಟ್ ಪತನವಾದವು. ಇದರ ಮಧ್ಯೆ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ದಿನೇಶ್ ಕಾರ್ತಿಕ್ ಜೊತೆಗೆ 37 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ರೋಹಿತ್ 48ರನ್ಗಳಿಸಿದ್ದ ವೇಳೆ ರೋಹಿತ್ ವಿಕೆಟ್ ಒಪ್ಪಿಸಿದರು.

ತಂಡದ ಸ್ಕೋರ್ 16 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 83ರನ್ ಆಗಿತ್ತು. ಈ ವೇಳೆ ಕಣಕ್ಕಿಳಿದ ಕಾರ್ತಿಕ್ (37)ಹಾಗೂ ಧೋನಿ(36) ತಂಡಕ್ಕೆ ಆಸರೆಯಾದರು. ಆದರೆ ಇವರ ವಿಕೆಟ್ ಬೀಳುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಮತ್ತೆ ಸೋಲಿನ ಭೀತಿ ಎದುರಾಯಿತು. ಈ ವೇಳೆ ಮೈದಾನಕ್ಕಿಳಿದ ಕೇದಾರ್ ಜಾಧವ್(19)ರನ್ಗಳಿಸಿದ್ದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ನಿವೃತ್ತಿ ಪಡೆದುಕೊಂಡರು. ಇದಾದ ಬಳಿಕ ಕಣಕ್ಕಿಳಿದ ಭುವನೇಶ್ವರ್ ಕುಮಾರ್ ಜಡೇಜಾಗೆ ಉತ್ತಮ ಸಾಥ್ ನೀಡಿದರು.

indai-3 [3]ಕೊನೆಯ 10 ಓವರ್ಗಳಲ್ಲಿ ತಂಡಕ್ಕೆ 51ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಸಮಯೋಚಿತ ಆಟವಾಡಿದ ಈ ಜೋಡಿ ತಂಡವನ್ನ ಗೆಲುವಿನ ದಡಕ್ಕೆ ಕರೆದುಕೊಂಡು ಹೋದರು. ತಂಡದ ಗೆಲುವಿಗೆ 11ರನ್ಗಳ ಅವಶ್ಯಕತೆ ಇದ್ದಾಗ ಜಡೇಜಾ(23) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಭುವಿ ಕೂಡ (21)ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡಕ್ಕೆ 9ರನ್ಗಳ ಅವಶ್ಯಕತೆ ಇತ್ತು.

ಜಡೇಜಾ ಭುವಿ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕಿಳಿದ ಜಾಧವ್(23) ಹಾಗೂ ಕುಲ್ದೀಪ್(5) ತಂಡವನ್ನ 50ನೇ ಓವರ್ನಲ್ಲಿ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಚೊಚ್ಚಲ ಟ್ರೋಫಿ ಗೆಲುವ ಕನಸು ಕಾಣುತ್ತಿದ್ದ ಬಾಂಗ್ಲಾದೇಶಕ್ಕೆ ಮತ್ತೊಮ್ಮೆ ನಿರಾಸೆಯಾಗಿದೆ.

ಇನ್ನು ಬಾಂಗ್ಲಾ ಪರ ಬೌಲಿಂಗ್ನಲ್ಲಿ ಮಿಂಚಿದ ಮುಸ್ತುಫಿಜುರ್, ರುಬೆಲ್ ಹುಸೇನ್ ತಲಾ 2ವಿಕೆಟ್, ನಜ್ಮುಲ್ ಇಸ್ಲಾಂ, ಮುರ್ತೂಜ್ ಹಾಗೂ ಮೊಹಮದುಲ್ಲಾ ತಲಾ 1ವಿಕೆಟ್ ಪಡೆದುಕೊಂಡರು.

ಇನ್ನು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.