- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸರ್ಕಾರಿ ಜಾಗದಲ್ಲಿ ಕ್ರೈಸ್ತರು-ಹಿಂದೂಗಳ ನಡುವೆ ಆರಾಧನೆಗೆ ಕಿತ್ತಾಟ

Koragajja [1]

ಮಂಗಳೂರು : ಸರ್ಕಾರಿ ಜಾಗದಲ್ಲಿ ಕ್ರೈಸ್ತರು ಮತ್ತೆ ಹಿಂದೂಗಳ ನಡುವೆ ಆರಾಧನೆ ಮಾಡುವ ವಿಚಾರದಲ್ಲಿ ಕಿತ್ತಾಟ ಆರಂಭ ಗೊಂಡಿದ್ದು ಮೇರಿಯ ಮಾತೆಯ ಆರಾಧನೆಯ ಸ್ಥಳದಲ್ಲಿ ಶುಕ್ರವಾರ ಮಧ್ಯರಾತ್ರಿ ನಂತರ ಕೊರಗಜ್ಜ ದೈವದ ಆರಾಧನೆ ಆರಂಭ ಗೊಂಡಿದೆ.

ಬಂಟ್ವಾಳ ತಾಲೂಕು ಕುಂಟ್ರಕಳದ ಸರ್ಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕಳೆದ 45 ವರ್ಷಗಳಿಂದ ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು  ಕೆಲವು  ಆರಾಧನೆ ಮಾಡುತ್ತಿದ್ದರು. ಸೆ.28 ಮಧ್ಯರಾತ್ರಿ  ಹಿಂದೂಗಳ ತಂಡ ಮೇರಿ ಮೂರ್ತಿ ಇದ್ದ ಪ್ರದೇಶದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿ ಸುತ್ತಲೂ ಕೇಸರಿ ಬಂಟಿಂಗ್ಸ್ ಕಟ್ಟಿದ್ದಾರೆ.

ಶನಿವಾರ  ಮುಂಜಾನೆ ಹಿಂದೂ, ಕ್ರೈಸ್ತ ಸಮುದಾಯದ ಯುವಕರ ಗುಂಪು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಕಾಂತೇಗೌಡ ಗುಂಪು ಚದುರಿಸಿದರು. ಬಂಟ್ವಾಳ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಈಗ ತನಿಖೆ ಆರಂಭಗೊಂಡಿದ್ದು ಪೊಲೀಸರು ಕುಂಟ್ರಕಳ ನಿವಾಸಿಗಳಾದ ಜಯರಾಮ ನಾಯ್ಕ (37), ಮೋನಪ್ಪ ನಾಯ್ಕ (48) ಎಂಬವರನ್ನು ಆರೋಪಿ ಗಳೆಂದು ವಶಕ್ಕೆ ಪಡೆದಿದ್ದಾರೆ.