ಬೆಂಗಳೂರು: ಜಿಮ್ ಟ್ರೈನರ್ ಮೇಲೆ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಹಾಗೂ ಟೀಂಗೆ ಬಿಗ್ ರಿಲೀಫ್ ಸಿಕ್ಕಿದೆ.
ನಟ ದುನಿಯಾ ವಿಜಿ ಮತ್ತು ಟೀಂಗೆ ಬೆಂಗಳೂರು ಸೆಷನ್ಸ್ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. 1ಲಕ್ಷ ರೂ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಇಡುವಂತೆ ಸೂಚನೆ ನೀಡಲಾಗಿದೆ. ತೀರ್ಪು ಪ್ರಕಟಿಸಿರುವ ನ್ಯಾ.ರಾಮಲಿಂಗೇಗೌಡ ಹೀರೋ ಬೇರೆಯವರಿಗೆ ರೋಲ್ ಮಾಡೆಲ್ ಆಗಿರಬೇಕು. ಮಾಧ್ಯಮಗಳಿವೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ತನಿಖೆಗೆ ಸಹಕರಿಸುವಂತೆ ಹಾಗೂ ಸಾಕ್ಷ್ಯ ನಾಶ ಮಾಡದಂತೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ಜಾಮೀನು ನೀಡಲಾಗಿದೆ. ಮುಂದೆ ಈ ರೀತಿಯಾಗಿ ವರ್ತನೆ ತೋರಬೇಡಿ. ನೀವು ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಹೀಗಾಗಿ ಸತತ 10 ದಿನಗಳ ಬಳಿಕ ನಟ ವಿಜಯ್ಗೆ ರಿಲೀಸ್ ಭಾಗ್ಯ ಸಿಕ್ಕಿದೆ. ಇನ್ನು ಸೆ.22 ರಂದು ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಅವರನ್ನ ಬಂಧನ ಮಾಡಲಾಗಿತ್ತು.
Click this button or press Ctrl+G to toggle between Kannada and English