ಉಪ್ಪಿನಂಗಡಿ ಹಿಂದೂ ಸಮಾಜೋತ್ಸವದಲ್ಲಿ ಎಸ್‌.ಐ. ಮತ್ತು ಯುವಕರ ಮೇಲೆ ಹಲ್ಲೆ

8:15 PM, Tuesday, January 24th, 2012
Share
1 Star2 Stars3 Stars4 Stars5 Stars
(3 rating, 6 votes)
Loading...

Hindu Samajotsava

ಪುತ್ತೂರು : ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದ ವೇಳೆ ಹಿಂದೂ ಕೋಮಿನ ಯುವಕರ ಮೇಲೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ. ಅದೇ ವೇಳೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಎಸ್‌.ಐ. ಸುನಿಲ್‌ ಕುಮಾರ್‌ ಮೇಲೆ 200 ಮಂದಿಯ ಗುಂಪು ಕಲ್ಲು ತೂರಾಟ ನಡೆಸಿದ ಪ್ರಕರಣವೂ ನಡೆದಿದೆ.

ಉಪ್ಪಿನಂಗಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಪಿ ಎಂಬವರು ಆರ್‌.ಎಸ್‌.ಎಸ್‌. ನೇತಾರ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ನ. ಸೀತಾರಾಮ, ಉಪ್ಪಿನಂಗಡಿ ಹಿಂದೂ ಹಿತರಕ್ಷಣಾ ವೇದಿಕೆಯ ಮುಂದಾಳುಗಳಾದ ಕರುಣಾಕರ ಸುವರ್ಣ, ಕಿಶೋರ್‌ ಶಿರಾಡಿ, ಸಭೆಯ ಅಧ್ಯಕ್ಷತೆ ವಹಿಸಿದ ಶೇಷಪತಿ ರೈ ವಿರುದ್ಧ ಮುಸ್ಲಿಂರ ಭಾವನೆ ಮತ್ತು ನಂಬಿಕೆಗಳಿಗೆ ದಕ್ಕೆಯಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Hindu Samajotsava

ಪೊಲೀಸ್‌ ಠಾಣೆಯ ಎಸ್‌.ಐ. ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಭಂದಿಸಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಹಿಂದೂ ಸಮಾಜೋತ್ಸವಕ್ಕೆ ಬಂದ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉಪ್ಪಿನಂಗಡಿ ಶೆಣೈ ನರ್ಸಿಂಗ್‌ ಹೋಮ್‌ ಜಂಕ್ಷನ್‌ ಬಳಿ ಕರ್ತವ್ಯ ನಿರತರಾಗಿದ್ದ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಎಸ್‌.ಐ. ಸುನಿಲ್‌ ಕುಮಾರ್‌ ಮೇಲೆ 200 ಮಂದಿಯ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.

Hindu Samajotsava

ಸಮಾಜೋತ್ಸವಕ್ಕೆ ಬಂದ ಗಣೇಶ್‌, ಸತೀಶ್‌ ಮತ್ತು ಕೇಶವ ಎಂಬವರ ಮೇಲೆ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಬಳಿ, ಇಳಂತಿಲ ರಸ್ತೆಯಲ್ಲಿ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯ ಕೋಮಿಗೆ ಸೇರಿದ ತಂಡಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English