- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುದ್ರೋಳಿ ಕಸಾಯಿಖಾನೆ ವಿವಾದ: ಯು ಟಿ ಖಾದರ್ ಸ್ಪಷ್ಟನೆ‌

u-t-kadher [1]ಮಂಗಳೂರು: ಕುದ್ರೋಳಿ ಕಸಾಯಿಖಾನೆ ವಿವಾದಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸ್ಪಷ್ಟನೆ‌ ನೀಡಿದ್ದಾರೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ, ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ. ಸ್ಮಾರ್ಟ್ ಯೋಜನೆಯ ಅನುದಾನ ನೀಡುವೆ ಎಂದು ಅವರು ಹೇಳಿದ್ದರು. ಇಂದು ಈ ವಿಚಾರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಚಿವ ಖಾದರ್ ಪ್ರತಿಕ್ರಿಯಿಸಿದ್ದಾರೆ.

ನಾವು ತಿನ್ನುವ ಆಹಾರ ಸ್ವಚ್ಛವಾಗಿರಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕಸಾಯಿಖಾನೆಗೆ ಜನರ ಆರೋಗ್ಯಕ್ಕೆ ಹಾನಿಯಾಗದ ಮಾಂಸ ಬರಬೇಕು. ಕಸಾಯಿಖಾನೆ ಪರಿಸರ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ಈ ಅನುದಾನವನ್ನು ಘೋಷಣೆ ಮಾಡಿದ್ದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಈ ಕಸಾಯಿಖಾನೆ ನಡೆಯುತ್ತಿತ್ತು. ಆಗ ಇದು ಅಕ್ರಮ ಕಸಾಯಿಖಾನೆ ಆಗಿರಲಿಲ್ಲವೇ ಎಂದು ಖಾದರ್ ಪ್ರಶ್ನಿಸಿದ್ದಾರೆ.

ಮಂಗಳೂರು ಕನಾಯಿಖಾನೆ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಭಾಗ..ಯೋಜನೆಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಸೇರ್ಪಡೆಗೊಳಿಸಿದ್ದು ಕೇಂದ್ರಸರಕಾರ…ಇದರ ಆಧಾರದಲ್ಲಿ  ನಾನು ಮಂಗಳೂರು ಕಸಾಯಿಖಾನೆಗೆ 15 ಕೋ.ರೂ.ಅನುದಾನ ನೀಡಲು ಸಲಹೆ ನೀಡಿದ್ದೇನೆ ಅಷ್ಟೇ..ತೀರ್ಮಾನ ಮಾಡುವುದು ಸಮಿತಿ..ಆ ಸಮಿತಿಯಲ್ಲಿ ನಾನಿಲ್ಲ..ಜಿಲ್ದಾಧಿಕಾರಿ, ಮೇಯರ್, ವಿರೋಧಪಕ್ಷದ ಸದಸ್ಯರಾದ ಬಿಜೆಪಿಯವರೂ ಇದ್ದಾರೆ..ತೀರ್ಮಾನ ಕೈಗೊಳ್ಳುವಾಗ ಬಿಜೆಪಿ ಸದಸ್ಯರು ಚಕಾರವೆತ್ತಲಿಲ್ಲ ಎಂದಿದ್ದಾರೆ.