ಸರ್ಫಿಂಗ್​ ವೇಳೆ ಅಪಘಾತ: ಆಸೀಸ್​ ಮಾಜಿ ಆಟಗಾರ ಹೇಡನ್​ಗೆ ಗಂಭೀರ ಗಾಯ

12:39 PM, Monday, October 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

mathew-haddenಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಅವರಿಗೆ ಅಪಘಾತವಾಗಿದ್ದು ಕುತ್ತಿಗೆಗೆ ಗಂಭೀರ ಗಾಯವಾಗಿದೆ.

ಹೇಡನ್ ಕುಟುಂಬದೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಅವರು ಕ್ವೀನ್ಸ್ಲೆಂಡ್ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತಕ್ಕೀಡಾದ ತಕ್ಷಣವೇ ಹೇಡನ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಅಪಘಾತವಾದ ಸಂದರ್ಭದ ಫೋಟೋವೊಂದನ್ನು ಹೇಡನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಹೇಡನ್ ತಲೆ ಭಾಗಕ್ಕೆ ಗಾಯವಾಗಿದ್ದು, ರಕ್ತದ ಕಲೆ ಕಾಣಿಸುತ್ತಿದೆ.

ಮತ್ತೊಂದು ಫೋಟೋದಲ್ಲಿ ಚಿಕಿತ್ಸೆಯ ನಂತರದ ಫೋಟೋ ಶೇರ್ ಮಾಡಿದ್ದು, ಅದರಲ್ಲಿ ತಮಗೆ ಅಪಘಾತವಾದ ತಕ್ಷಣ ಆಸ್ಪತ್ರೆಗೆ ಸೇರಿಸಿದವರನ್ನ ಸ್ಮರಿಸುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಆಕ್ಸಿಡೆಂಟ್ ವೇಳೆ ಸ್ಥಳದಲ್ಲಿದ್ದ ಬೆನ್ ಹಾಗೂ ಸ್ಯೂ ಕೆಲ್ಲಿ ನನಗೆ ತಕ್ಷಣ ನೆರವಿಗೆ ಧಾವಿಸಿದರು. ಇದೇ ವೇಳೆ ನನ್ನನ್ನು ಆಸ್ಪತ್ರೆಗೆ ಸೇರಿಸುವವರೆಗೂ ಸಹಾಯ ಮಾಡಿದ ಎಲ್ಲರಿಗೂ ಹೇಡನ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English