- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಿಬಿಎಲ್ ಬ್ಯಾಡ್ಮಿಂಟನ್​ ಲೀಗ್​: ಭಾರಿ ಮೊತ್ತಕ್ಕೆ ಸೈನಾ ನೆಹ್ವಾಲ್​, ಪಿ.ವಿ. ಸಿಂಧು

badmitton [1]ನವದೆಹಲಿ:ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್, ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಪ್ರಸಕ್ತ ವರ್ಷದ ಪಿಬಿಎಲ್ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ.

ಗರಿಷ್ಠ ಬೆಲೆ ಪಡೆದ ದೇಶಿ ಹಾಗೂ ವಿದೇಶಿ ಪ್ಲೇಯರ್ಸ್:

ಒಟ್ಟು 9 ತಂಡಗಳು ಭಾಗವಹಿಸಿದ್ದ 2018ರ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ (ಪಿಬಿಎಲ್‌) ಸೈನಾ ನೆಹ್ವಾಲ್‌ ನಾರ್ತ್‌ ಈಸ್ಟರ್ನ್ ವಾರಿಯರ್ ತಂಡಕ್ಕೂ ಪಿ.ವಿ. ಸಿಂಧು ಹೈದರಾಬಾದ್‌ ಹಂಟರ್ ತಂಡಕ್ಕೂ, ಶ್ರೀಕಾಂತ್‌ ಬೆಂಗಳೂರು ರ‍್ಯಾಪ್ಟರ್ ತಂಡಕ್ಕೆ ಮತ್ತೊಬ್ಬ ಯುವ ಆಟಗಾರ ಪ್ರಣಯ್‌ ಅವರನ್ನು ಡೆಲ್ಲಿ ಡ್ಯಾಶರ್ ಖರೀದಿಸಿತು. ಇವರೆಲ್ಲರಿಗೂ ಪಿಸಿಬಿಯ ಗರಿಷ್ಠ ಮೊತ್ತ 80 ಲಕ್ಷಕ್ಕೆ ಮಾರಾಟವಾಗಿದ್ದಾರೆ.

ಇನ್ನು ವಿದೇಶಿಯರಲ್ಲಿ ಡೆನ್ಮಾರ್ಕ್ನ ಸ್ಟಾರ್ ಆಟಗಾರ ವಿಕ್ಟರ್ ಆಕ್ಷೆಲ್ಸೆನ್ 80 ಲಕ್ಷಕ್ಕೆ ಅಹಮದಾಬಾದ್ ಸ್ಮ್ಯಾಶ್ ಮಾಸ್ಟರ್ ತಂಡಕ್ಕೆ, ದಕ್ಷಿಣ ಕೊರಿಯಾದ ಸುಂಗ್‌ ಜಿ ಹ್ಯುನ್‌ ಚೆನ್ನೈ ಸ್ಮ್ಯಾಶರ್ಸ್ ತಂಡಕ್ಕೆ ಹಾಗೂ ಲೀ ಯಾಂಗ್‌ ಡೆ ಅವರನ್ನು ಮುಂಬೈ ತಂಡ 80 ಲಕ್ಷ ರೂ ನೀಡಿ ಖರೀದಿಸಿದೆ.

badmitton-2 [2]ಯುವ ಆಟಗಾರರಿಗೆ ಬಂಪರ್:

ಭಾರತದ ಯಂಗ್‌ ಸೆನ್ಸೇಶನಲ್ ಪ್ಲೇಯರ್ಗಳಾದ ಲಕ್ಷ್ಯ ಸೇನ್‌ 11 ಲಕ್ಷ ರೂ.ಗೆ 7 ಏಸಸ್‌ ಪುಣೆ ತಂಡದ ಪಾಲಾದರೆ, ಸಾಥ್ವಿಕ್ ಶಾಯಿರಾಜ್ 52 ಲಕ್ಷಕ್ಕೆ ಅಹ್ಮದಾಬಾದ್ ತಂಡಕ್ಕೆ ಹಾಗೂ ಸೌರಭ್‌ ವರ್ಮ ಅವರನ್ನು 16 ಲಕ್ಷ ರೂ.ಗೆ ಅಹ್ಮದಾಬಾದ್‌ ಸ್ಮ್ಯಾಶ್‌ ಮಾಸ್ಟರ್ ಖರೀದಿಸಿದೆ.

ಮತ್ತೊಬ್ಬ ಕೊರಿಯಾದ ಯುವ ಆಟಗಾರ ಸನ್ ವಾನ್ ಹೊ ಅವರನ್ನು ಅವಾದ್ ವಾರಿಯರ್ಸ್ 70 ಲಕ್ಷಕ್ಕೆ, ಡೆನ್ಮಾರ್ಕ್ನ ಮೆಥಾಯಿಸ್ ಅವರನ್ನು 7 ಏಸಸ್‌ ಪುಣೆ 50 ಲಕ್ಷ ನೀಡಿ ಖರೀದಿಸಿದೆ.

9 ತಂಡಗಳು ತಲಾ 10 ಆಟಗಾರರನ್ನು ಖರೀದಿಸಿದ್ದು, ಅವಾದ್ ವಾರಿಯರ್ಸ್ ಬಿಟ್ಟು ಉಳಿದೆಲ್ಲ ತಂಡಗಳು ಐಕಾನ್ ಪ್ಲೇಯರ್ಗೆ 80 ಲಕ್ಷ ರೂ. ನೀಡಿದೆ, ವಾರಿಯರ್ಸ್ ಮಾತ್ರ 70 ಲಕ್ಷ ಗರಿಷ್ಠ ಬೆಲೆ ನೀಡಿದೆ. ಭಾರತದ 4 ಆಟಗಾರರಿಗೆ ವಿದೇಶದ 5 ಆಟಗಾರರಿಗೆ ಗರಿಷ್ಠ ಬೆಲೆ ದೊರೆತಿದೆ.