ಮಂಗಳೂರು: ಅಕ್ಟೋಬರ್ 10 ರಿಂದ 20 ರವರೆಗೆ ನೆಡೆಯುವ ದಸರಾ ಉದ್ಘಾಟನೆಗೆ ಕುಮಾರಸ್ವಾಮಿಗೆ ಕುದ್ರೋಳಿ ಗೋಕರ್ಣಾಥೇಶ್ವರ ಆಡಳಿತ ಸಮತಿ ಆಮಂತ್ರಣ ಪತ್ರವನ್ನು ನೀಡಿ ಆಹ್ವಾನಿಸಲಾಯಿತು. ಸಮಿತಿಯ ಕೋಶಾಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್, ಜೆಡಿಎಸ್ ಮುಖ್ಯಸ್ಥ ಅಕ್ಷಿತ್ ಸುವರ್ಣ ಮತ್ತು ಬೋಜೆಗೌಡ ಉಪಸ್ಥಿತರಿದ್ದರು.
ಈ ಬಾರಿ 75 ಟ್ಯಾಬ್ಲೋ ಗಳು ಪಾಲ್ಗೊಳ್ಳಲಿದೆ. ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರವಾಗಿದ್ದು, ನಗರದ ಪ್ರಮುಖ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ಮಂಗಳೂರು ದಸರಾ ಮಹೋತ್ಸವವನ್ನು ಅಕ್ಟೋಬರ್ 14 ರಂದು ಸಂಜೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ದಸರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ , ಅನ್ನದಾನ ನಡೆಯಲಿದೆ.
Click this button or press Ctrl+G to toggle between Kannada and English