ಬಜರಂಗ ದಳ ಕಾರ್ಯಕರ್ತರಿಗೆ 4 ಲಕ್ಷ ರೂ. ನಗದು ನೀಡಿದ ಸಚಿವ ಜಮೀರ್ ಅಹ್ಮದ್

4:03 PM, Thursday, October 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

zameerಮಂಗಳೂರು: ಕೊಡಗು ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನಾಲ್ವರು ಬಜರಂಗದಳ ಕಾರ್ಯಕರ್ತರಿಗೆ ಸಚಿವ ಜಮೀರ್ ಅಹ್ಮದ್ ತಮ್ಮ ಸ್ವಂತ 4 ಲಕ್ಷ ರೂ. ನಗದು ನೀಡಿ ಅಭಿನಂದಿಸಿದ್ದಾರೆ.

ಕಾನೂನು ಮಾಪನ ಶಾಸ್ತ್ರ ಇಲಾಖೆ ದ.ಕ. ಇದರ ವತಿಯಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಕಚೇರಿಗಳ ಸಂಕೀರ್ಣ ಮಾಪನ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಜಮೀರ್ ಅಹ್ಮದ್ ಈ ನಗದು ಕೊಡುಗೆಯನ್ನು ನೀಡಿದರು. ಈ ಸಂದರ್ಭ ಸಚಿವ ಜಮೀರ್ ಅಹ್ಮದ್ ಮಾತನಾಡಿ, ಇತ್ತೀಚೆಗೆ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭ 16 ಜನ ಯುವಕರು ತಮ್ಮ ಜೀವದ ಹಂಗು ತೊರೆದು 200 ಜನರ ಪ್ರಾಣ ಉಳಿಸಿದ್ದಾರೆ. ಅವರಲ್ಲಿ 12 ಜನ ಮಧ್ಯಮ ವರ್ಗದ ಮುಸ್ಲಿಂ ಯುವಕರು ಹಾಗೂ 4 ಹಿಂದೂ ಯುವಕರು.

zameer-2ಮುಸ್ಲಿಂ ಯುವಕರ ಅಪೇಕ್ಷೆಯಂತೆ ಅವರನ್ನು ಉಮ್ರಾಕ್ಕೆ ತೆರಳಲು ವ್ಯವಸ್ಥೆ ಮಾಡಿದ್ದೆ. ಆದರೆ ಉಳಿದ ನಾಲ್ಕು ಯುವಕರಿಗೆ ನಾನು ಭಾರತದ ಯಾವ ಹಿಂದೂ ಕ್ಷೇತ್ರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿದಾಗ ಅವರು ತಮ್ಮ ಕುಟುಂಬಸ್ಥರ ಸಮೇತ ತಾವೇ ತೆರಳುತ್ತೇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಇಂದು ಈ ನಗದು ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಕೆ., ಕಣಚೂರು ಮೋನು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English