- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ: ನಟ ದರ್ಶನ್ ಚಾಲನೆ

darshan [1]ಚಿತ್ರದುರ್ಗ: ದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಮೊದಲ ಕಾರ್ಯಕ್ರಮ ಸೌಹಾರ್ದ ನಡಿಗೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆಯನ್ನು ಹಮ್ಮಿಕೊಂಡಿದ್ದು, ಚಾಲನೆ ದೊರೆತ ಬೆನ್ನಲೇ ಜಾಥಾ ನಗರದ ಗಾಂಧಿ ವೃತ್ತದಿಂದ ಆರಂಭವಾಗಿ ನಂತರ ಮುರುಘಾಮಠದವರೆಗೆ ಕೊನೆಗೊಂಡಿತು.

ಈ ಜಾಥದಲ್ಲಿ ದರ್ಶನ್ ಭಾಗಿಯಾಗಿದ್ದರಿಂದ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು, ಇದರಿಂದ ಅಭಿಮಾನಿಗಳನ್ನು ಚದುರಿಸಲು ಪೋಲಿಸರು ಹರಸಾಹಸ ಪಡಬೇಕಾಗಿತು. ಇನ್ನು ಡಾ. ಶಿವಮೂರ್ತಿ ಶಿವಾಚಾರ್ಯರ ಸ್ವಾಮಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.

ಮದಕರಿ ಚಿತ್ರದ ಬಗ್ಗೆ ಮತನಾಡಲು ನಿರಾಕರಣೆ:

ನಗರದ ಖಾಸಗಿ ಹೋಟೆಲ್ನಲ್ಲಿ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತೆರಳುವ ಮುನ್ನ ಮಾತನಾಡಿದ ರಾಕ್ಲೈನ್ ವೆಂಕಟೇಶ್ ದಸರಾ ಆಚರಣೆ ಮಾಡಲು ಚಿತ್ರದುರ್ಗಕ್ಕೆ ಬಂದಿದ್ದೇವೆ. ದಸರಾ ಹಬ್ಬ ಮಾಡೋಣ, ಮುರುಘಾ ಶರಣರು ಜಾಗೃತಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಲು ಕರೆಸಿದ್ದಾರೆ ಎಂದರು.

ಚಿತ್ರದುರ್ಗದಲ್ಲಿದ್ದು ಮದಕರಿ ನಾಯಕ ಚಿತ್ರದ ಬಗ್ಗೆ ಮಾತನಾಡುವುದು ಬೇಡ, ಚಿತ್ರದ ಬಗ್ಗೆ ಮಾತನಾಡಲು ಪ್ರತ್ಯೇಕ ವೇದಿಕೆ ಸೃಷ್ಟಿಸುತ್ತೇವೆ, ಚಿತ್ರದ ಬಗ್ಗೆ ಏನು ಮಾತನಾಡಲ್ಲ. ಈಗ ಚಿತ್ರದುರ್ಗ ಹಾಗೂ ಚಿತ್ರದ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ರಾಕ್ಲೈನ್ ವೆಂಕಟೇಶ್ ಚಿತ್ರದ ಬಗ್ಗೆ ಮಾತನಾಡಲು ನಿರಾಕರಿಸಿದರು. ಇನ್ನೂ ನಟ ದರ್ಶನ್ ಮಾತನಾಡದೆ ಕೇವಲ ದಸರಾ ಹಬ್ಬದ ಶುಭಾಶಯಗಳು ಎಂದು ಜೋರಾಗಿ ಕೂಗುವ ಮೂಲಕ ಮಠದ ಕಡೆ ಪ್ರಯಣ ಬೆಳೆಸಿದ್ರು.

ಜೊತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಜೇಂದ್ರ ಸಿಂಗ್ ಬಾಬು, ನಟರಾದ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಕೂಡ ಸಾಥ್ ನೀಡಿದರು. ವೈಚಾರಿಕತೆ ಬಿತ್ತಿ ಸಮಾನತೆ ಸಾರುವ ಹಬ್ಬವಾಗಿರೋ ಉತ್ಸವದಲ್ಲಿ ದರ್ಶನ್ ಆಗಮನ ರಂಗೇರಿದೆ. ಮತ್ತೊಂದು ಕಡೆ ವೀರ ಮದಕರಿ ಸಿನಿಮಾ ಬಗ್ಗೆ ಉದ್ಭವಿಸಿರುವ ವಿವಾದದ ಬಗ್ಗೆ ದರ್ಶನ್ ಪ್ರತಿಕ್ರಿಯೆ ನೀಡ್ತಾರ ಕಾದು ನೋಡಬೇಕಿದೆ.