- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಿಕ್ಕಮ್ಮನ ಮೇಲೆ ಹಲ್ಲೆ ಪ್ರಕರಣ: ನಟ ರಿಷಿ ವಿರುದ್ಧ ಎಫ್​​ಐಆರ್ ದಾಖಲು..!

actor-rishi [1]ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಭರವಸೆ ನಟನಾಗಿ ಗುರುತಿಸಿಕೊಂಡಿದ್ದ ಯುವನಟ ರಿಷಿ ತನ್ನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದೇ ತಿಂಗಳ 11 ರಂದು ಎನ್ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿ ರಿಷಿಯನ್ನು ಎ2 ಆರೋಪಿ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ. ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಟ ರಿಷಿ, ತಂದೆ ನಾಗರಾಜ್, ತಾಯಿ ಅನಲಾ ವಿರುದ್ಧ ಶಾಲಿನಿ ಗೋಪಿನಾಥ್ ಎಂಬುವರು ದೂರು ನೀಡಿದ್ದರು.

ನಟ ರಿಷಿ ಕುಟುಂಬಸ್ಥರು ಬಸವೇಶ್ವರ ನಗರದಲ್ಲಿ ತಾತನ ಮನೆಯಲ್ಲಿ ವಾಸವಾಗಿದ್ದಾರೆ. ನಟನ ಚಿಕ್ಕಮ್ಮ ಶಾಲಿನಿ ಗೋಪಿನಾಥ್ ವಿಶಿಷ್ಟ ಚೇತನರಾಗಿದ್ದು, ತಂದೆಯನ್ನು ನೋಡುವ ಸಲುವಾಗಿ ಅಕ್ಟೋಬರ್ 10ರಂದು ಬಸವೇಶ್ವರದ ನಗರದ ಮನೆಗೆ ಬಂದಿದ್ದರು.‌

ಈ ವೇಳೆ ಆಕೆಯನ್ನು ರಿಷಿ ಕುಟುಂಬದವರು ಮನೆಯೊಳಗೆ ಬಿಡದೆ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಿದರೆ ಮಾತ್ರ ಮನೆ ಒಳಗೆ ಬಿಡುತ್ತೇವೆ ಎಂದು ಹೆದರಿಸಿದ್ದರು ಎನ್ನಲಾಗಿದೆ. ಈ ವೇಳೆ ಶಾಲಿನಿ ಜೋರಾಗಿ ಕೂಗಿಕೊಂಡಾಗ ರಿಷಿ ತಾಯಿ ಅನಲಾ ತನ್ನ ಬಾಯಿಗೆ ಕರ್ಚೀಫ್ ತುರುಕಿದ್ದರು. ಅಲ್ಲದೆ, ರಿಷಿ ಮಚ್ಚಿನಿಂದ ಹೆದರಿಸಿ ಖಾಲಿ ಪತ್ರಕ್ಕೆ ಸಹಿ ಮಾಡುವಂತೆ ಬೆದರಿಸಿದ್ದಾರೆ ಎಂದು ಶಾಲಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.