- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನ್ನಡ ನಟಿ ನೇಹಾ ಪಾಟೀಲ್​​​​ಗೆ ಇಂದು ನಿಶ್ಚಿತಾರ್ಥದ ಸಂಭ್ರಮ

neha-patil [1]ಬೆಂಗಳೂರು: ಸ್ಮೈಲ್ ಪ್ಲೀಸ್, ಸಿತಾರ, ವರ್ಧನ ಸಿನಿಮಾಗಳಲ್ಲಿ ನಟಿಸಿದ್ದ ನಟಿ ನೇಹಾ ಪಾಟೀಲ್ಗೆ ಇಂದು ನಿಶ್ಚಿತಾರ್ಥದ ಸಂಭ್ರಮ. ಬೆಂಗಳೂರು ಮೂಲದ ಪ್ರಣವ್ ಜೊತೆ ಇಂದು ನೇಹಾ ನಿಶ್ಚಿತಾರ್ಥ ಜರುಗಿದೆ.

ಮಾಗಡಿ ರಸ್ತೆಯಲ್ಲಿರುವ ವಿಸ್ಮಯ ಪಾರ್ಟಿ ಹಾಲ್ನಲ್ಲಿ ನೇಹಾ ಪಾಟೀಲ್ ಎಂಗೇಜ್ ಮೆಂಟ್ ಜರುಗಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ, ನೇಹಾ ಪಾಟೀಲ್ ಹಾಗು ಪ್ರಣವ್ ನಿಶ್ಚಿತಾರ್ಥ ಶಾಸ್ತ್ರ, ಸಂಪ್ರದಾಯದಂತೆ ನಡೆಸಲಾಯಿತು.

ಕೆಂಪು ಸೀರೆ ಹಾಗೂ ಹಸಿರು ಬ್ಲೌಸ್ನಲ್ಲಿ ನೇಹಾ ಬಹಳ ಮುದ್ದಾಗಿ ಕಾಣುತ್ತಿದ್ದರು. ಚಿತ್ರರಂಗದ ಹಾಗೂ ಕಿರುತೆರೆಯ ಸಾಕಷ್ಟು ನಟ/ನಟಿಯರು ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಾಜರಿದ್ದರು.