- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ದಸರಾದಲ್ಲಿ ಪಾಲ್ಗೊಂಡ 75ಕ್ಕೂ ಅಧಿಕ ಆಕರ್ಷಕ ಟ್ಯಾಬ್ಲೋಗಳು

Kudroli sharadhe [1]ಮಂಗಳೂರು : ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಪ್ರಯುಕ್ತ ಕಳೆದ ಒಂಬತ್ತು ದಿನಗಳ ಕಾಲ  ಭಕ್ತರಿಂದ ಪೂಜಿಸಲ್ಪಟ್ಟ ನವದುರ್ಗೆಯರು, ಶಾರದಾ ಮಾತೆ ಹಾಗೂ ಗಣಪತಿಯ ವಿಗ್ರಹವನ್ನು ಶನಿವಾರ ಬೆಳಗ್ಗೆ ಕ್ಷೇತ್ರದ  ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು.

ಶನಿವಾರ ಬೆಳಗ್ಗೆ 8:29ರರ ವೇಳೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ಸನ್ನಿಧಿಯ ಪುಷ್ಕರಿಣಿಯಲ್ಲಿ ಶಾರದಾ ಮಾತೆ ಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನಗೊಂಡಿತು.

ರಾತ್ರಿಯುದ್ದಕ್ಕೂ ಸಾಗಿದ ಶೋಭಾಯಾತ್ರೆ ಸುಮಾರು 9 ಕಿ.ಮೀ. ಸಾಗಿದ್ದು, ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನಸಮೂಹ ಆಗಮಿಸಿದ್ದರು. 75ಕ್ಕೂ ಅಧಿಕ ವಿವಿಧ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ವಿವಿಧ ಪ್ರದೇಶಗಳ ವಿವಿಧ ಹುಲಿವೇಷಗಳ ತಂಡಗಳ ಜತೆ ಯುವತಿಯರು ಹುಲಿ ವೇಷ ಕೂಡಾ ಗಮನ ಸೆಳೆದವು.

Kudroli sharadhe [2]ಶುಕ್ರವಾರ ಸಂಜೆ ಕುದ್ರೋಳಿ ದೇವಸ್ಥಾನದಿಂದ ಹೊರಟ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಮಣ್ಣಗುಡ್ಡೆ- ಲೇಡಿಹಿಲ್ ಸರ್ಕಲ್-ಲಾಲ್‌ಬಾಗ್-ಪಿವಿಎಸ್ ಸರ್ಕಲ್-ನವಭಾರತ ಸರ್ಕಲ್-ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ (ವಿ.ವಿ. ಕಾಲೇಜು ಬಳಿ ಬಲಕ್ಕೆ ತಿರುಗಿ)-ಗಣಪತಿ ಹೈಸ್ಕೂಲ್ ರಸ್ತೆ-ಕಾರ್‌ಸ್ಟ್ರೀಟ್-ಚಿತ್ರಾ ಟಾಕೀಸ್- ಅಳಕೆ ಮಾರ್ಗವಾಗಿ ಸಂಚರಿಸಿ ಶನಿವಾರ ಬೆಳಗ್ಗೆ ಕ್ಷೇತ್ರಕ್ಕೆ ತಲುಪಿತು.

ಅದಕ್ಕೂ ಮೊದಲು ಗೋಕರ್ಣನಾಥ ಮತ್ತು ಅನ್ನಪೂರ್ಣೇಶ್ವರಿಯ ಉತ್ಸವ ಮೂರ್ತಿಗಳನ್ನು ಬೆಳ್ಳಿಯ ರಥದಲ್ಲಿರಿಸಿ ಪುಷ್ಕರಿಣಿಯ ವಸಂತ ಮಂಟಪಕ್ಕೆ ತಂದು ಪೂಜೆ ನೆರವೇರಿಸಲಾಯಿತು.

Kudroli sharadhe [3]

Kudroli Dasara [4]

Kudroli Dasara [5]

Kudroli Dasara [6]

Kudroli Dasara [7]

Kudroli Dasara [8]

Kudroli Dasara [9]

Kudroli Dasara [10]

Kudroli Dasara [11]

Kudroli Dasara [12]

Kudroli Dasara [13]

Kudroli Dasara [14]

Kudroli Dasara [15]

Kudroli Dasara [16]

ಚಿತ್ರ ಪುಟ  [17]