- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಎಂಪಿಯ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್​ ಅಧಿಕಾರಿಗಳು ಎಸಿಬಿ ಬಲೆಗೆ

asb-arrest [1]ಬೆಂಗಳೂರು: ಮತ್ತೆ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಬಿಬಿಎಂಪಿಯ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್ಗಳಾದ ಜಗದೀಶ್ ಮತ್ತು ಜೈ ಕುಮಾರ್ ಎಸಿಬಿ ಬಲೆಗೆ ಬಿದ್ದವರು.

ಈ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್ಗಳು ಹೋಟೆಲೊಂದರ ಲೈಸನ್ಸ್ ನವೀಕರಣಕ್ಕೆ ಅದರ ಮಾಲೀಕರಿಂದ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.

ಇಬ್ಬರು ಅಧಿಕಾರಿಗಳ ಡ್ರಾನಲ್ಲಿ ದಾಖಲೆಯಿಲ್ಲದ 4 ಲಕ್ಷ ನಗದು ಪತ್ತೆಯಾಗಿದ್ದು, ಇಬ್ಬರು ಅಧಿಕಾರಿಗಳನ್ನ ಚೆನ್ನಮ್ಮನ ಅಚ್ಚುಕಟ್ಟು ಬಿಬಿಎಂಪಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.