- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾರ್ಪೊರೇಷನ್‍ ಬ್ಯಾಂಕ್‍ಗೆ ಪ್ರತಿಷ್ಠಿತ ಎಂಎಸ್ಎಂಇ ಬ್ಯಾಂಕ್ ಪ್ರಶಸ್ತಿ

corporation-bank [1]ಬೆಂಗಳೂರು: ಅಸ್ಸೋಚಾಮ್ ಸಂಸ್ಥೆ ಸ್ಥಾಪಿಸಿದ ಅತ್ಯುತ್ತಮ ಎಂಎಸ್ಎಂಇ ಬ್ಯಾಂಕ್-2018 ಪ್ರಶಸ್ತಿಗೆ ಕಾರ್ಪೊರೇಷನ್ ಬ್ಯಾಂಕ್ ಭಾಜನವಾಗಿದೆ.

ಬುಧವಾರ ಹೊಸದಿಲ್ಲಿಯಲ್ಲಿ ನಡೆದ 6ನೇ ಆವೃತ್ತಿಯ ಅಸೋಚಾಮ್ ಎಸ್ಎಂಇ ಎಕ್ಸಲನ್ಸ್ ಪ್ರಶಸ್ತಿ -2018 ಪ್ರಧಾನ ಸಮಾರಂಭದಲ್ಲಿ ಮೇಘಾಲಯದ ಮುಖ್ಯಮಂತ್ರಿ ಕಾನ್ರಾದ್ ಕೆ. ಸಂಗ್ಮಾ ಅವರು ಕಾರ್ಪೊರೇಷನ್ ಬ್ಯಾಂಕ್ನ ಡಿಜಿಎಂ ಶಿವಾನಂದ್ ಹೆಬ್ಬಾರ್ ಅವರಿಗೆ ಪ್ರಶಸ್ತಿ ನೀಡಿದರು.

ಸಣ್ಣ ಹಾಗೂ ಮಧ್ಯಮ ಉದ್ಯಮ ಕ್ಷೇತ್ರದಲ್ಲಿ ಬ್ಯಾಂಕ್ ತೋರಿಸಿದ ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಸಂದಿದೆ. ದೇಶಾದ್ಯಂತ 177 ವಿಶಿಷ್ಟ ಎಂಎಸ್ಎಂಇ ಶಾಖೆಗಳನ್ನು ಬ್ಯಾಂಕ್ ಸ್ಥಾಪಿಸಿದೆ. ಅಲ್ಲದೇ ಎಂಎಸ್ಎಂಇ ಗ್ರಾಹಕ ಸಾಲಗಾರರಿಗೆ ಆನ್ ಲೈನ್ ಮೂಲಕ ಸಾಲದ ಅರ್ಜಿ ಸೌಲಭ್ಯವನ್ನು ಬ್ಯಾಂಕ್ ಆರಂಭಿಸಿದೆ.

ಮಹಿಳಾ ಉದ್ಯಮಿಗಳಿಗೆ ಮತ್ತು ಶ್ರೇಯಾಂಕಿತ ಘಟಕಗಳಿಗೆ ಬಡ್ಡಿ ರಿಯಾಯಿತಿಗಳನ್ನು ಬ್ಯಾಂಕ್ ಒದಗಿಸುತ್ತಿದೆ. ಈ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.