ಒಂದೇ ವಾರದಲ್ಲಿ ಪೆಟ್ರೋಲ್ ಬೆಲೆ 2 ರೂ.. ಡೀಸೆಲ್​ ಬೆಲೆ 1ರೂ. ಇಳಿಕೆ

12:33 PM, Saturday, October 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

petrolನವದೆಹಲಿ: ಕಳೆದ ಒಂದುವಾರದಿಂದ ಹೆಚ್ಚು ಕಡಿಮೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ 2 ರೂ. ಇಳಿಕೆಯಾಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 1 ರೂ. ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 80.85 ರೂ. ಹಾಗೂ ಡೀಸೆಲ್ 74.73 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಅತಿ ಹೆಚ್ಚು ಅಂದರೆ 84 ರೂ.ಗೆ ಏರಿಕೆ ಕಂಡು ಗ್ರಾಹಕರ ಜೇಬನ್ನ ಬಿಸಿ ಮಾಡಿತ್ತು. ಇನ್ನು ಅಕ್ಟೋಬರ್ ನಾಲ್ಕರಂದು ದೆಹಲಿಯಲ್ಲಿ ಡೀಸೆಲ್ ಬೆಲೆ 75.45ಕ್ಕೆ ಹೆಚ್ಚಳ ಕಂಡಿತ್ತು.

ಇನ್ನು ಮುಂಬೈನಲ್ಲಿ ಇಂದು 40 ಪೈಸೆಯಷ್ಟು ಪೆಟ್ರೋಲ್ ದರ ತಗ್ಗಿದ್ದರಿಂದ 85.93 ರೂಗೆ ಬಂದು ನಿಂತಿದೆ. ಡೀಸೆಲ್ ಬೆಲೆಯಲ್ಲಿ 37 ಪೈಸೆಯಷ್ಟು ತಗ್ಗಿ 77.96ರೂ. ನಿಗದಿಯಾಗಿದೆ.

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 26 ಪೈಸೆಯಷ್ಟು ಕಡಿಮೆಯಾಗಿ ₹ 81.48 ರೂ.ಗೆ ತಗ್ಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 08 ಪೈಸೆ ಕಡಿತಗೊಂಡು, ₹ 75.11ಗೆ ದರ ನಿಗದಿಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English