ಮಂಗಳೂರು: ಭೂಮಿಯಲ್ಲಿ ವೈವಿಧ್ಯಮಯ ಜೀವರಾಶಿಗಳಿದ್ದರೂ ಎಲ್ಲ ತರದ ಜೀವರಾಶಿಗಳು ಮನುಷ್ಯನ ಕಣ್ಣಿಗೆ ಬೀಳಲ್ಲ. ಅಪರೂಪವಾಗಿರುವ ಹಲವು ಜೀವರಾಶಿಗಳಲ್ಲಿ ವಿಭಿನ್ನ ರೀತಿಯ ಹಾವುಗಳು ಕೂಡ ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದಲ್ಲಿ ಅಪರೂಪದ ಹಾವೊಂದು ಕಾಣ ಸಿಕ್ಕಿದೆ.
ಇಲ್ಲಿನ ಓಡಿಯಪ್ಪ ಗೌಡರ ಮನೆಯಲ್ಲಿ ಅಪರೂಪದ ಆರು ಅಡಿ ಉದ್ದದ ಹಾವೊಂದು ಕಂಡು ಬಂದಿದೆ. ನೋಡುವುದಕ್ಕೆ ಈ ಹಾವು ಜಿಬ್ರಾದಂತೆ ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿತ್ತು. ಈ ವಿಶೇಷ ಹಾವನ್ನು ನೋಡಲು ಸುತ್ತಮುತ್ತಲಿನ ನೂರಾರು ಮಂದಿ ಆಗಮಿಸಿದ್ದರು.
ಹಾವು ಕಂಡು ಸ್ಥಳೀಯರು ತಕ್ಷಣ ಉರಗತಜ್ಞ ಲಿಂಗಪ್ಪ ಮಾಚಾರು ಅವರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದಾರೆ.
Click this button or press Ctrl+G to toggle between Kannada and English