- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಜಿಲ್ಲೆಗೆ ಮುಸ್ಲಿಂ ಆಭ್ಯರ್ಥಿ

Muslims Candidate [1]ಮಂಗಳೂರು : ಲೋಕಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ನಾನಾ ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು ಕಾಂಗ್ರೆಸ್ಸ್ ಅಭ್ಯರ್ಥಿಗಳ ಅಂತಿಮ ಸುತ್ತಿನ ಪಟ್ಟಿಯಲ್ಲಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದ್ದು ಅದರಲ್ಲಿ ಯಾರ ಹೆಸರು ಅಂತಿಮಗೊಳ್ಳುತ್ತದೆ ಎಂಬ ಕುತೂಹಲ ಕಾಂಗ್ರೆಸ್ಸ್ ಕಾರ್ಯಕರ್ತರಲ್ಲಿ ಹೆಚ್ಚ ತೊಡಗಿದೆ.

ಜಿ,ಎ ಬಾವ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕೆಪಿಸಿಸಿ ಕಾರ‍್ಯದರ್ಶಿ, ಕೆ.ಎಸ್.ಅಮೀರ್ ಅಹಮ್ಮದ್ ತುಂಬೆ ಕಾಂಗ್ರೆಸ್ ಕಾರ್ಮಿಕ ವಿಭಾಗದ ಸಕ್ರೀಯ ಕಾರ್ಯಕರ್ತ, ವಕ್ಫ್ ಬೋರ್ಡಿನ ಅಧ್ಯಕ್ಷ ಕಣಚೂರು ಮೋನು ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಎಂಎಲ್‌ಎ ಮೊದಿನ್ ಬಾವ ಇವರ ಹೆಸರುಗಳನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಮಾಜಿ ಸಂಸದ ಜನಾರ್ಧನ ಪೂಜಾರಿಯವರ ಮೂಲಕ ಪಕ್ಷದ ಮುಖ್ಯಸ್ಥರಿಗೆ ಶಿಪಾರಸ್ಸು ಮಾಡಿದೆ.

ದಕ್ಷಿಣ ಕನ್ನಡದಲ್ಲಿ 4.5 ಲಕ್ಷ ಮತದಾರರಿದ್ದಾರೆ. ಕಳೆದ ವಿಧಾನಸಭೆಯ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್ಸ್ ಪಡೆದಿರುವುದು ಮಸ್ಲಿಂರ ಮತ ಬ್ಯಾಂಕಿನಿಂದ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹೇಳಿಕೊಂಡಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಬಂದ ನಂತರ ದಕ್ಷಿಣ ಕನ್ನಡದಿಂದ ರಾಜ್ಯದಲ್ಲಿ ಮಂತ್ರಿ ಪದವಿಯಂತಹ ಉನ್ನತ ಹುದ್ದೆಯನ್ನು ಪಡೆದವರು ಯು.ಟಿ.ಖಾದರ್ ಮತ್ತು ಬಿ.ಎ ಮೊದಿನ್ ಮಾತ್ರ. ರಾಜ್ಯ ಸಭೆಗೆ ಬಿ.ಇಬ್ರಾಹಿಂ ಒಬ್ಬ ನಾಮ ನಿರ್ದೇಶಿತ ಸದಸ್ಯರಾಗಿದ್ದರು ಅದು ಬಿಟ್ಟರೆ ಯಾರೂ ಆಗಿಲ್ಲ.

ಬಿ,ಜನಾರ್ಧನ ಪೂಜಾರಿಯವರು ಮುಸ್ಲಿಂ ಆಭ್ಯರ್ಥಿಗೆ ಬೆಂಬಲ ಸೂಚಿಸಿರುವುದು, ಕ್ರಿಶ್ಚಿಯನ್ ಸಮುದಾಯವೂ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಮುಸ್ಲಿಂ ಅಭ್ಯರ್ಥಿಯನ್ನು ಹಾಕುವುದೇ ಸೂಕ್ತ ಎಂದು ಹೈಕಾಮಾಂಡಿಗೆ ಕಾಂಗ್ರೆಸ್ಸಿನ ನಾಯಕರು ಶಿಪಾರಸು ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕಾಂಗ್ರೆಸ್ಸಿನ ನಾಯಕರು ಮತ್ತು ಮುಸ್ಲಿಂ ನಾಯಕರು ದೆಹಲಿಯ ಮುಖಂಡರ ಜೊತೆ ಚರ್ಚೆ ನಡೆಸುತ್ತಿದ್ದಾರೆ, ಮುಸ್ಲಿಂ ಅಭ್ಯರ್ಥಿಗೆ ಲೋಕಸಭೆಗೆ ಸ್ಫರ್ಧಿಸುವ ಸಲುವಾಗಿ ಬಲ ಪ್ರದರ್ಶನ ಮಾಡಲು ಡಿಸೆಂಬರ್ ತಿಂಗಳಲ್ಲಿ ಬೃಹತ್ ಮುಸ್ಲಿಂಮರ ಸಮಾವೇಶವನ್ನು ಕಾಂಗ್ರೆಸ್ಸಿನ ಹಿರಿಯ ನಾಯಕ ಮಹಮ್ಮದ್ ಮಸೂದ್ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹೇಳಿಕೆ ನೀಡಿದೆ.