- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಈ ಬಾರಿಯ ದೀಪಾವಳಿಗೆ ಮಂಗಳೂರಿಗೆ ಬಂದಿದೆ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು

VivekTraders [1]ಮಂಗಳೂರು  : ದೀಪಗಳ ಹಬ್ಬ ದೀಪಾವಳಿಗೆ ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರ ಮನೆಯನ್ನೂ ಬೆಳಗಿಸಲೂ ಇದೀಗ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮನೆಯಲ್ಲೆ ತಯಾರಿಸಬಹುದಾದ ಈ ಆಕಾಶ ಬುಟ್ಟಿಯನ್ನು ನಾವು ಇಲ್ಲಿಯವೆರೆಗೆ ಚೀನಾದಿಂದ ಖರೀದಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬಂದೊಂದಗಿತ್ತು!! ಆದರೆ ಈ ಬಾರಿ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ ಹೇಳುವ ಸಂದರ್ಭ ಬಂದಿದ್ದು ಸಮರ್ಪಣಾ ಟ್ರಸ್ಟ್ ನಿಂದ ಮಾರುಕಟ್ಟೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಪರಿಚಯಿಸಿದ್ದಾರೆ.

ಇಲ್ಲಿಯರೆಗೆ ಚೀನಾದ ಆಕಾಶ ಬುಟ್ಟಿಗಳಿಂದ ಮಿನುಗುತ್ತಿದ್ದ ನಮ್ಮ ಮನೆಗಳೆಲ್ಲಾ ಈ ಬಾರಿ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳಿಂದ ಜಗಮಗಿಸಲಿದ್ದು ಇದಕ್ಕೆ ಬಾಲಾಪರಾದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬುವುದೇ ವಿಶೇಷ. ಇಂತಹ ಮಕ್ಕಳಿಗೆ ದೀಪಾಳಿಯ ಸುಸಂದರ್ಭದಲ್ಲಿ ಹೊಸ ಜೀವನ ರೂಪಿಸಲು ಅವಕಾಶಕೊಟ್ಟಂತಾಗಿದೆ.

Vivek Traders [2]ಚೀನಾದಿಂದ ಬರುವ ಗೂಡು ದೀಪಗಳಿಗೆ ಲೆಕ್ಕವಿಲ್ಲದಷ್ಟು ವಿನ್ಯಾಸದ ವಿವಿಧ ಬಣ್ಣ, ಆಕಾರಗಳಲ್ಲಿ ಸಿಗುವ ಗೂಡು ದೀಪಗಳು ಅನೇಕರ ಆಕರ್ಷಣೆಯಾಗಿತ್ತು. ಆದರೆ ಈ ಬಾರಿ ಇಲ್ಲಿ ತಯಾರಿಸಿದ ಪ್ರತಿ ಲ್ಯಾಂಟರ್ನ್‍ಗಳನ್ನು 36 ಕಡ್ಡಿ ಹಾಗೂ ವರ್ಣರಂಜಿತ ಬಟ್ಟೆಗಳಿಂದ ಇದನ್ನು ತಯಾರಿಸಲಾಗಿದ್ದು ಇದರ ವೆಚ್ಚ ಕೇವಲ 300 ರೂಪಾಯಿ ಮಾತ್ರ. ಚೀನಾದ ಆಕಾಶ ದೀಪಕ್ಕೆ ಗುಡ್‍ಬೈ ಹೇಳುತ್ತಾ 100% ಶುದ್ಧ ಭಾರತೀಯರು ಮಾಡಿದ ಆಕಾಶ ದೀಪವನ್ನು ಮನೆಯಲ್ಲಿ ಬೆಳಗಲು ಮುಂದಾಗಿ ಈ ಬಾರಿಯ ದೀಪದ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸೋಣ.

ಇದೀಗ ಇಂತಹ ವಿಶಿಷ್ಟ ಆಕಾಶ ಬುಟ್ಟಿಗಳು ಮಂಗಳೂರಿನಲ್ಲಿರುವ ವಿವೇಕ್ ಟ್ರೇಡರ್ಸ್, ಮಂಗಳೂರು ಧ್ವನಂತರಿ ನಗರ, ವಿಟೋಬ ದೇವಸ್ಥಾನ ರಸ್ತೆ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008416493

Vivek Traders [3]