ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕುರಾನ್ ವಾಚಿಸಿದ ಖಾದರ್​ ಪುತ್ರಿ

10:15 AM, Monday, November 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

u-t-khaderಮಂಗಳೂರು: ದುಬೈಯಲ್ಲಿ ಹನ್ನೆರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಕುರಾನ್ ಸ್ಪರ್ಧೆಯಲ್ಲಿ ಸಚಿವ ಯು.ಟಿ. ಖಾದರ್ ಪುತ್ರಿ ಹವ್ವಾ ನಸೀಮಾ ಇಂದು ಪಾಲ್ಗೊಂಡರು.

ದುಬೈ ಸರ್ಕಾರವು ಅಲ್ ಮಮ್ಝಾರ್ನಲ್ಲಿ ನಿರ್ಮಿಸಿರುವ ಜಾಗತಿಕ ಮಟ್ಟದ ವೇದಿಕೆಯಲ್ಲಿ ಕುಳಿತು ಸಚಿವ ಯು.ಟಿ. ಖಾದರ್ ಪುತ್ರಿ ಹಾಫಿಝಾ ಹವ್ವಾ ನಸೀಮಾ ಅವರು ಮೊದಲನೇ ಸುತ್ತಿನಲ್ಲಿ ಕುರಾನ್ ಪಠಿಸಿದರು.

u-t-khader-2ವಿಶ್ವದ 104 ರಾಷ್ಟ್ರಗಳ 25 ವರ್ಷದೊಳಗಿನ 150 ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಯುಎಇ ಉಪಾಧ್ಯಕ್ಷರು ಮತ್ತು ಪ್ರಧಾನ ಮಂತ್ರಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದ್ದಾರೆ. ಶೇಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಲ್ಲಿ “ದುಬೈ ಹೋಲಿ ಕುರಾನ್ ಅವಾರ್ಡ್” ಸ್ಪರ್ಧೆ ನಡೆಯುತ್ತಿದ್ದು ಭಾರತದ ಏಕೈಕ ಪ್ರತಿನಿಧಿಯಾಗಿ ಮಲಪ್ಪುರಂ ಮದಿನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಹಾಗೂ ಯು.ಟಿ.ಖಾದರ್ ಪುತ್ರಿ ಹಾಫಿಝಾ ಹವ್ವಾ ನಸೀಮಾ ಭಾಗವಹಿಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English