- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಾ.ಬಿ.ಆರ್ ಶೆಟ್ಟಿಗೆ ‘ಕರ್ನಾಟಕದ ಕಲಾರತ್ನ ಪ್ರಶಸ್ತಿ’ ಪ್ರಧಾನ..!

b-r-shetty [1]ಅಬುದಾಬಿ: ಕರ್ನಾಟಕ ಸಂಘ ಅಬುಧಾಬಿ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನವಂಬರ್ 2 ರಂದು ನಗರದ ಇಂಡಿಯನ್ ಕಲ್ಚರಲ್ ಸೋಷ್ಯಲ್ ಸೆಂಟರ್ ನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಜರಗಿತು.

ಕಾರ್ಯಕ್ರಮವು ಸಂಘದ ಮಾಹ ಪೋಷಕರಾದ ಡಾ. ಬಿ ಆರ್ ಶೆಟ್ಟಿ ,ಶ್ರೀಮತಿ ಡಾ. ಚಂದ್ರಕುಮಾರಿ ಶೆಟ್ಟಿ, ಯುಎಇ ಎಕ್ಷೆಂಜಿನ ಸುಧಿರ್ ಕುಮರ್ ಶೆಟ್ಟಿ, ಹಾಸ್ಯ ಬಾಷಾಣಗಾರ ಪ್ರೋ. ಕೃಷ್ಣಗೌಡರು, ಉದ್ಯಮಿ ರೊನೊಲ್ಡ್ ಫಿಂಠೊ, ಇಂಡಿಯಾನ್ ಸೋಷಿಯಲ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷ ರಮೇಶ್ ಪಣಿಕಾರ್, ಸೆಂಟರ್ ನ ಉಪಾದ್ಯಕ್ಷ ಜಯರಾಮ್ ರೈ , ಹಲವಾರು ಗಣ್ಯರ ಸಮ್ಮುಖದಲ್ಲಿ ಹಾಗು ಕರ್ನಾಟಕ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಯೊಂದಿಗೆ ಆರಂಭಗೊಂಡಿತು. ನಂತರ ವೇದಿಕೆಯಲ್ಲಿ ವಿವಿಧ ಕನ್ನಡ ಮನೋರಂಜನ ಕಾರ್ಯಕ್ರಮಗಳು ಜರಗಿತು.

ಸಂಘದ ಹೆಮ್ಮೆಯ ಪೋಷಕರು ಹಾಗು ಯು. ಎ.ಇ ಯ ತುಳು ಕನ್ನಡಿಗರ ಕಣ್ಮಣಿ ಡಾ.ಬಿ.ಆರ್ ಶೆಟ್ಟಿಯವರಿಗೆ ಕರ್ನಾಟಕದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಯು. ಎ.ಇ ಯ ಭಾರತೀಯ ರಾಯಭಾರಿ ನವದೀಪ್ ಸುರಿ, ಹಾಸ್ಯ ಭಾಷಣಗಾರ ಪ್ರೊ ಕೃಷ್ಣ ಗೌಡ , ಯು.ಎ.ಇ ಯ ಎಕ್ಸೇಂಜಿನ ಸುದೀರ್ ಕುಮಾರ್ ಶೆಟ್ಟಿ ಹಾಗು ಕರ್ನಾಟಕದ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಬಳಿಕ ಸಮೂಹ ಗೀತೆ,ಜನಪದ ನೃತ್ಯ ಹಲವಾರು ಕಾರ್ಯಕ್ರಮಗಳು ಜರಗಿತು.ಪ್ರೊ.ಕೃಷ್ಣ ಗೌಡರ ಹಾಸ್ಯ ಭಾಷಣವಂತು ಸೇರಿದವರನ್ನು ನಗೆ ಕಡಲಲ್ಲಿ ತೇಲಿಸಿತು.ಸರ್ವೋತಮ ಶೆಟ್ಟಿ ಹಾಗು ಮನೋಹರ ತೋನ್ಸೆಯವರ ಕಾರ್ಯಕ್ರಮದ ನಿರೂಪಣೆ ಬಹಳ ಸೊಗಸಾಗಿ ಮೂಡಿ ಬಂತು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಪ್ರಾಯೋಜಕರನ್ನು ತುಳು ಕನ್ನಡ ಸಂಘ ಸಂಸ್ಥೆಗಳ ರೂವಾರಿಗಳು ಹಾಗೂ ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು.