- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆನ್​ಲೈನ್​ನಲ್ಲಿ ದುಬಾರಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ

online [1]ಬೆಂಗಳೂರು: ಆನ್ಲೈನ್ನಲ್ಲಿ ದುಬಾರಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಮೂಲದ ಮಹೇಶ್ ಬಂಧಿತ ಆರೋಪಿ. ಬೆಂಗಳೂರಿನ ಉತ್ತರ ವಿಭಾಗವನ್ನು ಟಾರ್ಗೆಟ್‌ ಮಾಡಿಕೊಂಡು ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಸಂಜಯ್ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಆನ್ಲೈನ್ನಲ್ಲಿ ಹೆಚ್ಚಿನ ಬಾಡಿಗೆಯ ಆಮಿಷ ನೀಡಿ ಒಮ್ಮೆಗೆ ಮೂರ್ನಾಲ್ಕು ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುತ್ತಿದ್ದ.

ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ನ ಮಹೇಶ್ ಎಂಬುವವರಿಂದ ಕಳೆದ ಸೆಪ್ಟೆಂಬರ್ನಲ್ಲಿ ಆರು ಲಕ್ಷ ಬೆಲೆ ಬಾಳುವ ನಿಕಾನ್, ಹಾಗೂ ಕ್ಯಾನನ್ ಕ್ಯಾಮರಾಗಳನ್ನು ಪಡೆದಿದ್ದ ನಂತರ ಕ್ಯಾಮೆರಾ ಹಿಂದಿರುಗಿಸದೇ ವಂಚಿಸುತ್ತಿದ್ದ.

ಮೋಸ ಹೋದ ಮಹೇಶ್ ಕ್ಯಾಮೆರಾ ಬಾಡಿಗೆಗೆ ಪಡೆದಿದ್ದ ಆರೋಪಿ ಮಹೇಶ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿದ್ದರು. ಮತ್ತೊಂದೆಡೆ ಈ ಮಹೇಶ್ ಮೇಲೆ ಉತ್ತರ ವಲಯ ಠಾಣೆಗಳಲ್ಲಿ ಹಲವಾರು ಪ್ರಕರಣ ದಾಖಲಾಗುತ್ತಾ ಹೋದವು.

ಇದ್ರಿಂದ ಎಚ್ಚೆತ್ತ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಉತ್ತರ ವಿಭಾಗ ಪೊಲೀಸರ ಟೀಂ ರಚನೆ ಮಾಡಿ ಆರೋಪಿಯನ್ನ ಕೂಡಲೇ ಬಂಧಿಸುವಂತೆ ಸೂಚಿಸಿದ್ರು. ಸದ್ಯ ಆರೋಪಿಯನ್ನ ಬಂಧಿಸಿರುವ ಸಂಜಯನಗರ ಠಾಣೆ ಪೊಲೀಸರು ಬಂಧಿತನಿಂದ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.