- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ: ವೆಬ್‌ಸೈಟ್‌ಗೆ ಚಾಲನೆ

mastakabhisheka website [1]
ಉಜಿರೆ: ಶ್ರವಣಬೆಳಗೊಳದದಲ್ಲಿ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀಪಾಲ್ ಗಂಗ್ವಾಲ್ ಧರ್ಮಸ್ಥಳದಲ್ಲಿ 2019 ರ ಫೆಬ್ರವರಿ 9 ರಿಂದ 18vರ ವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ವೆಬ್‌ಸೈಟ್‌ಗೆ ಭಾನುವಾರ ಚಾಲನೆ ನೀಡಿ ಶುಭ ಹಾರೈಸಿದರು.

ವೆಬ್‌ಸೈಟ್: www.bahubali.live [2]
ಇದರಲ್ಲಿ ಮಸ್ತಕಾಭಿಷೇಕದ ಸವಿವರ ಮಾಹಿತಿ ಲಭ್ಯವಿದೆ. ಅಲ್ಲದೆ ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರ ಎಲ್ಲಾ ಮಾಹಿತಿ ಲಭ್ಯವಿದೆ. ಕಾಲಕಾಲಕ್ಕೆ ಸುದ್ದಿಯನ್ನು ಇದರಲ್ಲಿ ಅಳವಡಿಸಲಾಗುವುದು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಪ್ರಧಾನ ಸಂಚಾಲಕ ಡಿ. ಸುರೇಂದ್ರ ಕುಮಾರ್, ಸಂಚಾಲಕರಾದ ಡಿ. ಹರ್ಷೇಂದ್ರ ಕುಮಾರ್, ವಿಮುಕ್ತಿ ಜೈನ್, ವಿವೇಕ್ ಜೈನ್, ವಿಕಾಸ್ ಜೈನ್, ಎ.ವಿ. ಶೆಟ್ಟಿ, ಅಭಿಜಿತ್ ಜೈನ್, ಪೂರಣ್ ವರ್ಮ, ಪ್ರಸನ್ನ ಕುಮಾರ್, ದಿವ ಕೊಕ್ಕಡ ಮತ್ತು ಪ್ರೊ. ಎಸ್. ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.