ಮುಂಬೈ: ಭಾರತ ಕಂಡ ಘೋರ ಘಟನೆಯಾದ ಮುಂಬೈ ಮೇಲಿನ ಉಗ್ರ ದಾಳಿ ನಡೆದು ಇಂದಿಗೆ 10 ವರ್ಷಗಳಾಗಿವೆ. ದಶಕ ಕಳೆದರೂ ಆ ಕರಾಳ ದಿನದ ನೆನಪು ದೇಶದ ಇತಿಹಾಸದಲ್ಲಿ ಹಾಗೆ ಉಳಿದುಕೊಂಡಿದೆ.
26/11 2008ರಂದು ಪಾಪಿ ಪಾಕಿಸ್ತಾನದಿಂದ ಸಮುದ್ರ ಮುಖಾಂತರ ಮೀನುಗಾರರನ್ನು ಕೊಂದು ಕಳ್ಳತನದಿಂದ ವಾಣಿಜ್ಯ ನಗರವಾದ ಮುಂಬೈ ಪ್ರವೇಶಿಸಿ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದುಕೊಂಡಿದ್ದರು.
ನ.26ರಂದು ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ,ಒಬೆರಾಯ್ ಟ್ರೈಡೆಂಟ್,ಸೆಂಟ್ ಕ್ಸೇವಿಯರ್ ಕಾಲೇಜು, ಕಾಮಾ ಆಸ್ಪತ್ರೆ ಸೇರಿದಂತೆ 7 ಕಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 166 ಜನ ಮೃತಪಟ್ಟು, 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 17 ಜನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.
ಇನ್ನು 10 ಉಗ್ರರಲ್ಲಿ 9 ದಾಳಿಕೋರರನ್ನು ಭದ್ರತಾ ಪಡೆ ಕೊದು ಹಾಕಿತ್ತು. ಜೀವಂತ ಸೆರೆ ಹಿಡಿದಿದ್ದ ಅಜ್ಮಲ್ ಕಸಬ್ನನ್ನು ನವೆಂಬರ್ 21 2012ರಲ್ಲಿ ರಂದು ಗಲ್ಲಿಗೇರಿಸಲಾಯಿತು.
ದಾಳಿ ನಡೆದು ಹತ್ತು ವರ್ಷಗಳಾಗಿದೆ, ಆದರೆ ಪಾಕಿಸ್ತಾನ ಮಾತ್ರ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದಾಳಿಯ ಪ್ರಮುಖ ಸಂಚುಕೋರ ಎನ್ನಲಾದ, ಲಷ್ಕರ್ ಎ ತೋಯ್ಬಾದ ಮುಖ್ಯಸ್ಥ–ಉಗ್ರ ಹಫೀಜ್ ಪಾಕಿಸ್ತಾನದಲ್ಲಿ ಬಂಧಮುಕ್ತವಾಗಿ ಸಂಚರಿಸುತ್ತಿದ್ದಾನೆ.
ಇಂದಿಗೆ ಆ ಕರಾಳ ದಿನ ನಡೆದು 10 ವರ್ಷಗಳಾಗಿದ್ದು, ಅಂದು ಉಗ್ರರ ಅಟ್ಟಹಾಸಕ್ಕೆ ಮಡಿದವರ ಸೇನೆಯ ಸಿಪಾಯಿಗಳು ಸೇರಿದಂತೆ ಎಲ್ಲಾ ನಾಗರೀಕರ ಆತ್ಮಕ್ಕೆ ಶಾಂತಿ ಕೋರಬೇಕಿದೆ.
Click this button or press Ctrl+G to toggle between Kannada and English