ಮಂಗಳೂರು ಬೀಚ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 6 ಯುವಕರ ಬಂಧನ

10:32 AM, Tuesday, November 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

commissionerಮಂಗಳೂರು: ಬೀಚಿಗೆ ವಿಹಾರಕ್ಕೆ ಬಂದಿದ್ದ ಯುವತಿಯನ್ನು ಏಳು ಜನರ ದುಷ್ಕರ್ಮಿಗಳ ತಂಡ ಗ್ಯಾಂಗ್ ರೇಪ್ ಮಾಡಿದ ಪೈಶಾಚಿಕ ಕೃತ್ಯ ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದೆ.

ನವೆಂಬರ್ 18ರಂದು ಈ ಘಟನೆ ನಡೆದಿದ್ದು, ಯುವತಿ ನೀಡಿದ ದೂರಿನ ಮೇಲೆ ಇಂದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಿಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿ ಯುವಕನೊಂದಿಗೆ ವಿಹಾರಕ್ಕೆಂದು ತೋಟಬೆಂಗ್ರೆ ಬೀಚಿಗೆ ಬಂದಿದ್ದರು. ಆ ವೇಳೆ ಬೀಚಿನಲ್ಲಿ ಏಳು ಜನ ಯುವಕರ ತಂಡ ಯುವತಿ ಜೊತೆ ಇದ್ದ ಯುವಕನ ಮೇಲೆ ಹಲ್ಲೆ ಮಾಡಿ, ಯುವತಿಯನ್ನು ಅತ್ಯಾಚಾರಗೈದಿದ್ದಾರೆ. ಸಂತ್ರಸ್ತೆ ಇಂದು ಪೊಲೀಸರಿಗೆ ದೂರು ನೀಡಿದ್ದು, ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English