ಸಮಾನತೆಯಲ್ಲಿ ಕನಕದಾಸರ ಪಾತ್ರ ಮಹತ್ವಪೂರ್ಣ

3:24 PM, Thursday, November 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

kanakadasaಮಂಗಳೂರು: ಭಕ್ತಿ ಪರಂಪರೆ ಒಂದು ಒಳಗೊಳ್ಳುವಿಕೆಯ ಪರಂಪರೆಯಾಗಿದೆ. ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಖಂಡಿಸಿ ಅದನ್ನು ದೂರಗೊಳಿಸುವ ಪ್ರಯತ್ನಗಳು ಭಕ್ತಿಪರಂಪರೆಯ ಕಾಲಘಟ್ಟದಲ್ಲಿ ನಡೆದಿತ್ತು ಎಂದು ಖ್ಯಾತ ಚಿಂತಕ ಪ್ರೊ| ಬಸವರಾಜ ಕಲ್ಗುಡಿ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ಬುಧವಾರ ಮಂಗಳೂರು ವಿವಿಯ ಹಳೆಸೆನೆಟ್‌ ಸಭಾಂಗಣದಲ್ಲಿ ಕನಕ ತಣ್ತೀಚಿಂತನ ಮತ್ತು ಕನಕ ಗಂಗೋತ್ರಿ ಕಾರ್ಯಕ್ರಮದಲ್ಲಿ ‘ಭಕ್ತಿಪರಂಪರೆಯ ಲೋಕಯಾನ ಮತ್ತು ಕನಕದಾಸರು: ಸಮಕಾಲೀನ ಸಂವಾದ’ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಭಕ್ತಿ ಪರಂಪರೆಯ ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯನ್ನು ಯಾವುದೇ ಜಾತಿ ಧರ್ಮದಲ್ಲಿ ನೋಡದೆ ಆತನನ್ನು ಅಂತಃಸತ್ವದ ಮೂಲಕ ವ್ಯಕ್ತಿಯನ್ನಾಗಿ ನೋಡುವ ದೃಷ್ಟಿಕೋನವನ್ನು ಇಟ್ಟುಕೊಂಡಿತ್ತು. ಪರಂಪರಾಗತ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ವಿರೋಧಿಸಿದ ಮೊದಲ ಪರಂಪರೆ ಭಕ್ತಿ ಪರಂಪರೆಯಾಗಿದೆ. ಭಕ್ತಿ ಪರಂಪರೆಯಲ್ಲಿ ಕನಕದಾಸರಿಗೆ ಬಹು ದೊಡ್ಡ ಹೆಸರು ಇದೆ. ಕನಕ ಭಕ್ತ ಮಾತ್ರವಲ್ಲ, ಕವಿ ಹೃದಯವುಳ್ಳ ದೊಡ್ಡ ದಾರ್ಶನಿಕನೂ ಹೌದು. ಸಾಮಾಜಿಕ ವ್ಯವಸ್ಥೆಯ ಬಗ್ಗೆ ಚಿಂತನೆ, ಧೋರಣೆಗಳನ್ನು ಕನಕನ ಕೀರ್ತನೆಗಳಲ್ಲಿಯೇ ನಾವು ಕಾಣಬಹುದು ಎಂದರು.

ಸಣ್ಣ ಸಮುದಾಯಕ್ಕೆ ಸೀಮಿತವಾಗಿದ್ದ ಕೃಷ್ಣನನ್ನು ನಾಲ್ಕುಗೋಡೆಗಳ ನಡುವಿನಿಂದ ಹೊರಗೆ ತಂದು ಲೋಕಕ್ಕೆ ಪರಿಚಯಿಸುವುದರೊಂದಿಗೆ ಸಮಾನತೆಯ ಸಮಾಜ ನಿರ್ಮಾಣದ ಕಾರ್ಯದಲ್ಲಿ ಕನಕನ ಪಾತ್ರ ಮಹತ್ವಪೂರ್ಣವಾದುದು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರು ಕನಕದಾಸ ಸಂಶೋಧನ ಕೇಂದ್ರವು ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ಕನಕನ ಚಿಂತನೆಗಳನ್ನು ಜನರಿಗೆ ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ| ಈಶ್ವರ ಪಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನಕ ಚಿಂತನ ಕೃತಿಗಳ 2ನೇ ಆವೃತ್ತಿಯನ್ನು ಬಿಡುಗಡೆ ಗೊಳಿಸಲಾಯಿತು. 2017-18ನೇ ಸಾಲಿನ ಕನಕ ಪುರಸ್ಕಾರವನ್ನು ಸಾಧಕರಿಗೆ ನೀಡಿ ಗೌರವಿಸಲಾಯಿತು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ಬಿ. ಶಿವರಾಮ ಶೆಟ್ಟಿ ಸ್ವಾಗತಿಸಿ, ಸಂಶೋಧನ ಸಹಾಯಕ ರಮೇಶ್‌ ಆರ್‌. ವಂದಿಸಿದರು. ಅರ್ಪಿತಾ ನಿರೂಪಿ ಸಿದರು. ಸಭೆ ಬಳಿಕ ಕನಕಗಂಗೋತ್ರಿ ಕೀರ್ತನ ಗಾಯನ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ| ಪಿ.ಎಲ್‌.ಧರ್ಮ ಮಾತನಾಡಿ, ಕನಕನಲ್ಲಿ ನಾವು ಸಾಮಾಜಿಕ ಸಮಾನತೆ, ಪ್ರಜಾಪ್ರಭುತ್ವದ ನೆಲೆ ಹಾಗೂ ಬಹುತ್ವದ ಚಿಂತನೆಯನ್ನು ಕಾಣಲು ಸಾಧ್ಯವಿದೆ. ನಮ್ಮೊಳಗಿರುವ ಅಹಂ ಅನ್ನು ನಾವು ದೂರಗೊಳಿಸದಿದ್ದರೆ ಕನಕನ ಚಿಂತನೆಗಳನ್ನು ನಾವು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English