- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧೂಮಪಾನ, ಮದ್ಯಪಾನದಿಂದ ಆಯಸ್ಸು ಕಡಿಮೆ

[1]ಧೂಮಪಾನ, ಮದ್ಯಪಾನ, ದುರ್ಬಲ ಆಹಾರಕ್ರಮ ಮತ್ತು ನಿಷ್ಕ್ರಿಯತೆ – ಈ ನಾಲ್ಕು ದುರಾಭ್ಯಾಸಗಳು ಮನುಷ್ಯ ಜೀವಿತಾವಧಿಯಲ್ಲಿ ಕನಿಷ್ಠ 12 ವರ್ಷಗಳನ್ನು ಕಡಿತ ಮಾಡುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಆದರೆ ಜೀವನಕ್ರಮ ಬದಲಾಯಿಸಿಕೊಳ್ಳುವುದರಿಂದ ಇದನ್ನು  ತಡೆಗಟ್ಟ ಬಹುದು. ಈ ದುರಾಭ್ಯಾಸಗಳು ಇಲ್ಲದವರಿಗಿಂತ ಇರುವವರು ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಬಲಿಯಾಗುವ ಸಾಧ್ಯತೆಗಳು ಮೂರು ಪಟ್ಟು ಹಾಗೂ ಇತರ ರೋಗಗಳಿಂದ ಸಾವಿಗೀಡಾಗುವ ಸಾಧ್ಯತೆಗಳು ನಾಲ್ಕು ಪಟ್ಟು ಹೆಚ್ಚು ಎಂದು ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಎಂಬ ಆರೋಗ್ಯ ಸಂಬಂಧಿತ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಹೇಳಿದೆ.