ಕೆನಡಾ: 552 ಕ್ಯಾರಟ್ ಹಳದಿ ವಜ್ರ ಕೆನಡಾದ ವಾಯವ್ಯ ಪ್ರಾಂತ್ಯದ ದೈವಿಕ್ ಗಣಿ ಪ್ರದೇಶದಲ್ಲಿ ಲಭ್ಯವಾಗಿದ್ದು, ಇದು ಹಿಂದೆಂದೂ ಲಭ್ಯವಾಗದ ಅತಿ ದೊಡ್ಡ ವಜ್ರದ ಹರಳು ಎಂದೇ ಹೇಳಲಾಗುತ್ತಿದೆ.
ದೈವಿಕ್ ಗಣಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಜ್ರ ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ ಇದು ಇಲ್ಲಿಯವರೆಗೆ ಲಭ್ಯವಾಗಿರುವ ಅತಿ ದೊಡ್ಡ ವಜ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡೊಮಿನಿನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ದುರ್ಗಿನ್ ಮಾತನಾಡಿದ್ದು, ಲಭ್ಯವಾಗಿರುವ ವಜ್ರ ಅತಿ ದೊಡ್ಡ ಗುಣಮಟ್ಟದಿಂದ ಕೂಡಿರುವುದಾಗಿ ತಿಳಿಸಿದ್ದಾರೆ. ಆದರೆ ಇದರ ಬೆಲೆ ಎಷ್ಟು, ಗುಣಮಟ್ಟ ಎಂತಹದ್ದು ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬೇಕಿದೆ ಎಂದು ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಆಫ್ರಿಕನ್ ಗಣಿಗಳಲ್ಲಿ ಬಿಳಿ ಬಣ್ಣದ ವಜ್ರ ಕಂಡು ಬರುತ್ತವೆ. ಆದರೆ ಅಲಂಕಾರಿಕ ಹಳದಿ ಬಣ್ಣದ ವಜ್ರ ಇಲ್ಲಿ ಕಂಡು ಬರುವುದು ಸರ್ವೆ ಸಾಮಾನ್ಯ. ಲೆಕ್ಕಾಚಾರಗಳ ಪ್ರಕಾರ ಈ ಶತಮಾನದ ಅತಿದೊಡ್ಡ 7ನೇ ವಜ್ರ ಇದಾಗಿದ್ದು, ಇದುವರೆಗೂ ಅಂದಾಜು 30 ವಜ್ರಗಳು ಇಲ್ಲಿ ಲಭ್ಯವಾಗಿವೆ. 1905ರಲ್ಲಿ ಪ್ರಿಟೋರಿಯಾದ ಬಳಿ ಬರೋಬ್ಬರಿ 3,106 ಕ್ಯಾರಟ್ ವಜ್ರ ಲಭ್ಯವಾಗಿತ್ತು. ಇದು ಇಲ್ಲಿಯವರೆಗೆ ಲಭ್ಯವಾಗಿರುವ ಅತಿ ದೊಡ್ಡ ಕ್ಯಾರಟ್ ವಜ್ರ.
Click this button or press Ctrl+G to toggle between Kannada and English