- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭ

karyagara [1]ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿ.ವಿ 9 ದೃಶ್ಯ ಮಾಧ್ಯಮ ಹಾಗೂ ಸಾನಿಧ್ಯ, ಭಿನ್ನ ಸಾಮಥ್ರ್ಯ ಮಕ್ಕಳ ತರಬೇತಿ ಸಂಸ್ಥೆ, ಮಂಗಳೂರು ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ 2019 ಜನವರಿಯಲ್ಲಿ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ.

ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ತರಬೇತಿದಾರರು, ವಿಶೇಷ ಶಿಕ್ಷಕಿಯರು, ಫಿಸಿಯೋಥೆರಪಿಸ್ಟ್ /ಸ್ಫೀಚ್‍ಥೆರಪಿಸ್ಟ್ /ಆಕ್ಯುಪೇಶನಲ್‍ಥೆರಪಿಸ್ಟ್/ ಸೈಕಾಲಾಜಿಸ್ಟ್ ರ ಸೇವೆ, ವಾಹನ, ಆಹಾರ ಹಾಗೂ ಇತರೇ ಇತರ ಮೂಲಭೂತ ಸೌಕರ್ಯಗಳೊಂದಿಗೆ ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸಲಿದ್ದು, ಉಜಿರೆ ಕೇಂದ್ರದಿಂದ 15 ಕಿ. ಮೀ ವ್ಯಾಪ್ತಿಯೊಳಗಿನ ಆಸಕ್ತ ಎಂಡೋಸಲ್ಫಾನ್ ಸಂತ್ರಸ್ತರು ತಮ್ಮ ಹೆಸರನ್ನು ಸಂಬಂಧಿಸಿದ ಆರೋಗ್ಯ ಕೇಂದ್ರಗಳ ಮೂಲಕ ನೊಂದಾಯಿಸಲು ಎಂಡೋಸಲ್ಫಾನ್ ಸಂತ್ರಸರ ಪುನರ್ವಸತಿ ಕಾರ್ಯಕ್ರವ್ಮದ ಜಿಲ್ಲಾ ನೋಡಲ್ ಅಧಿಕಾರಿ ಪ್ರಕಟಣೆ ತಿಳಿಸಿದೆ.