- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉತ್ತಮ ಆರೋಗ್ಯ ಆರ್ಥಿಕ ಪ್ರಗತಿಗಾಗಿ ದುಶ್ಚಟ ಮುಕ್ತರಾಗಬೇಕು

dharmasthala alcohol [1]ಉಜಿರೆ: ಉತ್ತಮ ಆರೋಗ್ಯ, ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವ ಹಾಗೂ ಆರ್ಥಿಕ ಪ್ರಗತಿಗಾಗಿ ದುಶ್ಚಟ ಮುಕ್ತರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾಗಿ ನೂರು ದಿನಗಳನ್ನು ಪೂರೈಸಿದ ಮೂರು ಸಾವಿರ ವ್ಯಸನಮುಕ್ತರಿಗೆ ಹಿತ ವಚನ ನೀಡಿದರು.

ವ್ಯಸನ ಮುಕ್ತ ಜೀವನ ನಡೆಸಲು ಜನಜಾಗೃತಿ ವೇದಿಕೆ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. ದುಶ್ಚಟದಿಂದಾಗಿ ಕೋಟ್ಯಾಂತರ ಹಣ ಪೋಲಾಗುತ್ತಿದೆ. ಇರುವ ಜೀವನದಲ್ಲಿ ಸುಖ, ನೆಮ್ಮದಿ ಕಾಣಬೇಕು. ವರ್ತನೆಯಲ್ಲಿ ಪರಿವರ್ತನೆ ಆದಾಗ, ಆರ್ಥಿಕ ಪ್ರಗತಿಆದಾಗ ಸಮಾಜದಲ್ಲಿಯೂ ಉತ್ತಮ ಗೌರವ ಸಿಗುತ್ತದೆ. ಆದುದರಿಂದ ಎಲ್ಲರೂ ವ್ಯವಸನ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

dharmasthala alcohol [2]ಐವತ್ತಕ್ಕೂ ಮಿಕ್ಕಿ ಮದ್ಯವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಮಾಡಿದ ಕೆ.ಆರ್.ಪೇಟೆಯ ಹರೀಶ್‌ರಿಗೆ ಜಾಗೃತಿ ಅಣ್ಣ ಹಾಗೂ ಇಪ್ಪತ್ತೈದಕ್ಕೂ ಮಿಕ್ಕಿ ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಿದ ಬಂಟ್ವಾಳದ ಕುಶಾಲಪ್ಪ ಮತ್ತು ಕೊಪ್ಪಳದ ಸ್ವಾಮಿ ಎಂಬಾತನಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಹೆಗ್ಗಡೆಯವರು ಗೌರವಿಸಿದರು.

ಮಂಡ್ಯದ ಕೆ.ಎಸ್. ರಾಜೇಶ್, ಅಶ್ವತ್ ಪೂಜಾರಿ ಮತ್ತುಕಮಲಾಕ್ಷ ನಾಯರ್ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ಪಾಸ್ ಸ್ವಾಗತಿಸಿದರು. ಶಿಬಿರಾಧಿಕಾರಿ ತಿಮ್ಮಯ್ಯ ನಾಯ್ಕ ಧನ್ಯವಾದವಿತ್ತರು.

ಮುಖ್ಯಾಂಶಗಳು:
ಆಯಾಊರಿನ ಸಾರ್ವಜನಿಕರಿಂದಲೇ ವೆಚ್ಚವನ್ನು ಭರಿಸಿ ಮದ್ಯವರ್ಜನ ಶಿಬಿರ ನಡೆಸುವುದುಉತ್ತಮ ಬೆಳವಣಿಗೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರೆಗೆ 1,303 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದೆ ಎಂದುಅವರು ತಿಳಿಸಿದರು.

ಉತ್ತಮಕಲಾವಿದನಾದತಾನು ಮದ್ಯ ವ್ಯಸನಿಯಾಗಿಕಲೆಯಲ್ಲಿಯೂ ಸ್ಥಾನ, ಮಾನ ಕಳೆದುಕೊಂಡು ಸಂಸಾರವೂ ಹಾಳಾಗಿತ್ತು. ನನಗೆ ಮದ್ಯದ ಬೆಲೆ ಗೊತ್ತಿತ್ತೆ ವಿನಾ ದಿನಸಿ ವಸ್ತುಗಳ ಬೆಲೆ ತಿಳಿದಿರಲಿಲ್ಲ. ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿ, ವ್ಯಸನ ಮುಕ್ತನಾಗಿ 5 ತಿಂಗಳಲ್ಲಿ ಎಪ್ಪತ್ತೈದು ಸಾವಿರರೂ. ಸಾಲ ತೀರಿಸಿದ್ದೇನೆ. ಸಂಸಾರದಲ್ಲಿಇಂದು ಶಾಂತಿ, ನೆಮ್ಮದಿ ಇದೆ. ಸಮಾಜದಲ್ಲಿಯೂ ಉತ್ತಮ ಗೌರವ ಸಿಗುತ್ತಿದೆ ಎಂದು ತುಮಕೂರಿನ ಮರಳಸಿದ್ದಯ್ಯ ತನ್ನ ಅನಿಸಿಕೆ ವ್ಯಕ್ತಪಡಿಸಿದರು.