ಕೊಡಗು: ಅಂತಾರಾಷ್ಟ್ರೀಯ ಹಾಕಿಪಟು ಕೊಡಗಿನ ನಿತಿನ್ ತಿಮ್ಮಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ಸಂಸ್ಥೆ ಉದ್ಯೋಗಿ ವಿಷ್ಮಾ ದೇಚ್ಚಮ್ಮರನ್ನು ನಿತಿನ್ ತಿಮ್ಮಯ್ಯ ವರಿಸಿದ್ದಾರೆ.
ವಿರಾಜಪೇಟೆ ಮತ್ತು ಕೇರಳ ಗಡಿಗೆ ಹೊಂದಿಕೊಂಡಿರುವ ಬಾಳುಗೋಡುವಿನ ಕೊಡವ ಸಮಾಜದ ಒಕ್ಕೂಟಗಳ ಕಲ್ಯಾಣ ಮಂಟಪದಲ್ಲಿ ಕೊಡಗಿನ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಿತು.
ನಿತಿನ್ ತಿಮ್ಮಯ್ಯ ವಿವಾಹ ಸಮಾರಂಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ವಿನಯ್, ಅರ್ಜುನ ಪ್ರಶಸ್ತಿ ವಿಜೇತ ವಿ. ಆರ್ ರಘುನಾಥ್, ಹಾಕಿ ಇಂಡಿಯಾ ಮುಖ್ಯಸ್ಥ ಎ. ಬಿ. ಸುಬ್ಬಯ್ಯ, ಸೇರಿದಂತೆ ಕುಟುಂಬದ ಸದಸ್ಯರು, ಸ್ಥಳೀಯ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English