ಮೂಡುಬಿದಿರೆ: ಕಂಪೆನಿಗಳ ಪೈಪೋಟಿ ತಂತ್ರಗಳ ಕುರಿತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಿಜಾರಿನ ಕ್ಯಾಂಪಸ್‍ನಲ್ಲಿ ಆಯೋಜಿಸಲಾಯಿತು.
ಲಂಡನ್ ಕೆಪಿಎಂಜಿ ಆಡಳಿತಾತ್ಮಕ ಸಲಹೆಗಾರ್ತಿ ಲೌರಾ ಕ್ರೆನ್ಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಣ್ಣ ಹಾಗೂ ಸ್ಟಾರ್ಟ್‍ಅಪ್ ಕಂಪೆನಿಗಳು ಯಾವ ರೀತಿ ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯ ಎನ್ನುವುದರ ಬಗ್ಗೆ ತಿಳಿಸಿದರು.
ಎಂಬಿಎ ವಿಭಾಗದ ಡೀನ್ ಪ್ರೊ. ಪಿ ರಾಮಕೃಷ್ಣ ಚಡಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English