ವ್ಯಾಪಾರಕ್ಕೋಸ್ಕರ ಇವರು ಕಾರ್ಯಕ್ರಮದ ಮಧ್ಯವೇ ಮಾನ ಕಳೀತಾರೆ

10:21 PM, Monday, January 7th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

pressಮಂಗಳೂರು : ಸಮಯ ಪರಿಪಾಲನೆ ನೆಪದಲ್ಲಿ ಯಕ್ಷಗಾನ ಪ್ರೇಕ್ಷಕರ ಮುಂದೆಯೇ ಧ್ವನಿವರ್ಧಕ ತೆಗೆದು,  ಲೈಟ್  ಆಪ್ ಮಾಡಿ ನಾವು ವ್ಯಾಪಾರದ ಮುಂದೆ ಯಾವುದಕ್ಕೂ ಹೇಸುವವರಲ್ಲ ಎಂದು ಲೇಡಿಹಿಲ್ ಚರ್ಚ್ ನ ಉದ್ಯೋಗಿಗಳು ಪತ್ರಕರ್ತರಿಗೆ ತೋರಿಸಿಕೊಟ್ಟಿದ್ದಾರೆ.

ಪ್ರೆಸ್‍ಕ್ಲಬ್ ಡೇ ಹೆಸರಿನಲ್ಲಿ ಮಂಗಳೂರಿನ ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ, ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು.  ಪತ್ರಕರ್ತರ  ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲೇ ಮೈಕ್, ಲೈಟ್ ತೆಗೆದು ಅವಮಾನ ಮಾಡಿದವರು ಅಲ್ಲಿನ ಕೆಲಸಗಾರರು.

ಮಂಗಳೂರಿನ ಉರ್ವ ಲೇಡಿಹಿಲ್ ಚರ್ಚ್ ಹಾಲ್‍ನಲ್ಲಿ ಪ್ರೆಸ್‍ಕ್ಲಬ್ ಡೇ ಆಚರಿಸಲಾಗುತ್ತಿತ್ತು. ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ, ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪತ್ರಕರ್ತರ ಯಕ್ಷಗಾನ ನಡೆಯುತ್ತಿದ್ದ ವೇಳೆ ಚರ್ಚ್ ಹಾಲ್ ನ ಮ್ಯಾನೇಜರ್ ಧ್ವನಿವರ್ಧಕ ಮತ್ತು ರಂಗಸ್ಥಳದ ಲೈಟ್ ಆಫ್ ಮಾಡಿ, ಯಕ್ಷಗಾನಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿದೆ.

ದಿನನಿತ್ಯದ ಜಂಜಾಟ ನಡುವೆಯೂ ಪತ್ರಕರ್ತರೆಲ್ಲ ಬಿಡುವು ಮಾಡಿಕೊಂಡು ಯಕ್ಷಗುರು ರಾಮಚಂದ್ರ ರಾವ್ ಎಲ್ಲೂರು ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ನರಕಾಸುರ ವಧೆ, ಮೈಂದ ದ್ವಿವಿಧ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು.1.45 ಗಂಟೆಯ ಯಕ್ಷಗಾನ ಅವಧಿ.

ಆದರೆ ಸಭಾ ಕಾರ್ಯಕ್ರಮಗಳು ವಿಳಂಬವಾದ ಕಾರಣ ಮಧ್ಯಾಹ್ನ 1.30ರ ಬಳಿಕ ಯಕ್ಷಗಾನ ಆರಂಭವಾಗಿತ್ತು. 3 ಗಂಟೆಯಾಗುತ್ತಿದ್ದಂತೆಯೇ ಸಭಾಂಗಣದ ಅವಧಿ ಮುಗಿಯಿತು ಎಂದು ಮ್ಯಾನೇಜರ್ ಧ್ವನಿವರ್ಧಕ ಬಂದ್ ಮಾಡಿಸಿದರು. ಸಿಬ್ಬಂದಿ ವೇದಿಕೆಯಿಂದ ಮೈಕ್ ಗಳನ್ನು ಎಳೆದುಕೊಂಡು ಹೋದರು.

ಈನಡುವೆಯೂ ಮಹಿಳಾ ಭಾಗವತರು ಮೈಕ್ ಇಲ್ಲದಿದ್ದರೂ ಎದೆಗುಂದದೆ ಭಾಗವತಿಕೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಲೈಟ್ ಕೂಡಾ ಆಫ್ ಮಾಡಿದರು. ನೋವಾದರೂ ತೋರಿಸದ ಪತ್ರಕರ್ತರು ಧ್ವನಿವರ್ಧಕ, ಲೈಟ್ ಇಲ್ಲದೆಯೂ 20 ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿ, ಮಂಗಲ ಹಾಡಿದರು.

ಹಾಲ್ ನ ಸಿಬ್ಬಂದಿ ತೋರಿದ ದುರ್ವತನೆ ಬಗ್ಗೆ ಯಕ್ಷ ಗುರು ರಾಮಚಂದ್ರ ಭಟ್ ವಿಷಾದಿಸಿದ್ದಾರೆ. ಸಂಘಟಕರಿಗೆ ಅವಮಾನ ಅಥವಾ ಪತ್ರಕರ್ತರಿಗೆ ಆದ ಅವಮಾನ ಅಲ್ಲ. ಯಕ್ಷಗಾನ ನಡೆಯುತ್ತಿದ್ದಾಗಲೇ ಮೈಕ್, ಲೈಟ್ ಕಿತ್ತು ಹಾಕುವುದು ಕಲೆಗೆ ಮಾಡುವ ಘೋರ ಅವಮಾನ. ನನ್ನ ಇಡೀ ಯಕ್ಷಗಾನ ಬದುಕಿನಲ್ಲಿ ಈ ರೀತಿ ಆಗಿಲ್ಲ. ಚರ್ಚ್ ಮಾಲೀಕರು, ಸಿಬ್ಬಂದಿ ಕ್ಷಮೆ ಯಾಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English