- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆತ್ತವರ ತ್ಯಾಗವನ್ನು ಗೌರವಿಸುವವರಾಗಿ: ಎಂ.ಪದ್ಮನಾಭ ಪೈ

Canara high school [1]ಮಂಗಳೂರು: ಹೆತ್ತವರು ತಮ್ಮ ಮಕ್ಕಳ ಶಿಕ್ಷಣ ಮತ್ತು ಉತ್ತಮ ಭವಿಷ್ಯಕ್ಕಾಗಿ ಮಾಡುವ ತ್ಯಾಗವನ್ನು ಮಕ್ಕಳು ಮರೆಯಬಾರದು. ಸಮಾಜದಲ್ಲಿ ಉನ್ನತ ಸಾಧಕರಾಗುವುದರ ಜತೆಗೆ ತಮ್ಮ ಹೆತ್ತವರನ್ನು ಗೌರವಿಸುವ, ಪ್ರೀತಿಸುವ ಸಂಸ್ಕೃತಿಯನ್ನು ಅವರು ಬೆಳೆಸಿಕೊಳ್ಳಬೇಕು. ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಮೂಲಕ ಮಕ್ಕಳಲ್ಲಿ ಎಳವೆಯಲ್ಲೇ ಈ ಮನೋಭಾವ ಬೆಳೆಯುವಂತಾಗಬೇಕು ಎಂದು ಉದ್ಯಮಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ಹೇಳಿದರು. ಅವರು ಇತ್ತೀಚೆಗೆ ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾಷರ್ಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಶಾಲಾ ಹಳೆ ವಿದ್ಯಾರ್ಥಿ , ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಪ್ರಶಾಂತ್ ಕುಮಾರ್.ಎ. ಸ್ವಸ್ತಿವಾಚನಗೈದು ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವ, ಮಾತೃಭಾಷೆಯಲ್ಲಿ ಶಿಕ್ಷಣದ ಅಗತ್ಯತೆಯ ಕುರಿತು ತಿಳಿಸಿದರು. ಶ್ರೀಮತಿ ಪ್ರಿಯಾ ಪದ್ಮನಾಭ ಪೈ ವಿದ್ಯಾರ್ಥಿ ಗಳಿಗೆ ಬಹುಮಾನಗಳನ್ನು ವಿತರಿಸಿದರು. ಶಾಲಾ ಆಡಳಿತ ಮಂಡಳಿಯ ಎಂ. ವಾಮನ್ ಕಾಮತ್, ಕೆ ಸುರೇಶ್ ಕಾಮತ್, ಶಾಲಾ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ ಶಾಲಾ ಮುಖ್ಯೋಪಾಧ್ಯಾಯಿನಿ ಮೋಹಿನಿ ಉಪಸ್ಥಿತರಿದ್ದರು.

ಸಹಶಿಕ್ಷಕಿ ಸಂಧ್ಯಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ವಿನಯ.ಎಸ್.ಸ್ವಾಗತಿಸಿ ಸುಜಾತ.ಪಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.