- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಫೆ. 9 ರಿಂದ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Masthakabhisheka [1]ಉಜಿರೆ: ಧರ್ಮಸ್ಥಳದಲ್ಲಿ ಫೆ. 9 ರಿಂದ 18ರ ವರೆಗೆ ನಡೆಯಲಿರುವಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಧರ್ಮಸ್ಥಳದ ಶ್ರೀ ಸನ್ನಿಧಿಅತಿಥಿಗೃಹದಲ್ಲಿ ನಡೆಯಿತು.

ಸಚಿವಯು.ಟಿ.ಖಾದರ್‌ಎಲ್ಲಾ ಇಲಾಖಾ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಸವಿವರ ಮಾಹಿತಿ ಪಡೆದು ಫೆ.೧೦ ರೊಳಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.

ನೇತ್ರಾವತಿ ಸ್ನಾನಘಟ್ಟದಿಂದಧರ್ಮಸ್ಥಳದವರೆಗೆ, ಬಾಹುಬಲಿ ಬೆಟ್ಟ ಸಂಪರ್ಕರಸ್ತೆ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದರಸ್ತೆಯಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಫೆಬ್ರವರಿ ಪ್ರಥಮ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕಎಂಜಿನಿಯರ್ ಶಿವಪ್ರಸಾದ ಅಜಿಲ ತಿಳಿಸಿದರು.
ಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಬರುವುದರಿಂದ ಸುರಕ್ಷತೆ ಮತ್ತು ಭದ್ರತೆ ಬಗ್ಯೆಎಚ್ಚರಿಕೆ ವಹಿಸಬೇಕು.ಅಲ್ಲಲ್ಲಿ ಸಿ.ಸಿ.ಟಿ.ವಿ. ಅಳವಡಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಮೂಲಭೂತ ಸೌಕರ್ಯಒದಗಿಸುವುದರೊಂದಿಗೆಅಲಂಕಾರಿಕ ವಿದ್ಯುದ್ದೀಪಗಳನ್ನು ಅಳವಡಿಸಬೇಕೆಂದು ಪ್ರಸ್ತಾಪ ಬಂದಾಗ ಸಚಿವರುಅಂದಾಜು ವೆಚ್ಚ ಅಧಿಕಾರಿಗಳಲ್ಲಿ ಕೇಳಿದರು.ತಕ್ಷಣ ಸಚಿವಖಾದರ್‌ಪ್ರವಾಸೋದ್ಯಮ ಸಚಿವರನ್ನುದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುದ್ದೀಪಗಳಿಂದ ರಸ್ತೆ ಬದಿಯಲ್ಲಿ ಅಲಂಕಾರಗೊಳಿಸಲು ಎರಡುಕೋಟಿರೂ. ಬೇಕಾಗಿದ್ದು ಮಂಜೂರು ಮಾಡುವಂತೆಕೋರಿದರು.ಸಚಿವರುತಕ್ಷಣಅನುಮತಿ ನೀಡಿಅನುದಾನ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

ಮಂಗಳವಾರ ಸಂಜೆಯೇ ಪ್ರಸ್ತಾವನೆ ಕಳುಹಿಸುವುದಾಗಿ ಸಚಿವಖಾದರ್ ತಿಳಿಸಿದರು. ಹೆಗ್ಗಡೆಯವರಿಗೂದೂರವಾಣಿ ಮೂಲಕ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡಿಸಿ, ಹೆಗ್ಗಡೆಯವರುಅವರನ್ನುಕ್ಷೇತ್ರಕ್ಕೆ ಆಮಂತ್ರಿಸಿದರು.
ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವೆ ಮಾಡುವ ಅವಕಾಶ ದೊರಕಿರುವುದುದೇವರು ನಮಗೆ ಕೊಟ್ಟ ಭಾಗ್ಯ.ಎಲ್ಲಾ ಅಧಿಕಾರಿಗಳು ಸಂಘಟಿತ ಪ್ರಯತ್ನ ಮಾಡಿ, ಮಸ್ತಕಾಭಿಷೇಕ ಯಶಸ್ಸಿಗೆ ಸಹಕರಿಸಬೇಕುಎಂದು ಹೇಳಿದರು.
ಮೆಸ್ಕಾಂ, ಸಾರಿಗೆ, ಆರೋಗ್ಯ ಇಲಾಖೆ, ಪೊಲೀಸ್‌ಇಲಾಖೆಯವರಿಗೂ ಸಚಿವರು ಸೂಕ್ತ ನಿರ್ದೇಶನ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಬಾಹುಬಲಿಯ ಅಹಿಂಸೆ, ಸಂಯಮ, ತ್ಯಾಗ ಮತ್ತು ಶಾಂತಿಯ ಸಂದೇಶ ಸಾರುವುದೇಮಸ್ತಕಾಭಿಷೇಕದಉದ್ದೇಶವಾಗಿದೆಎಂದು ಹೇಳಿದರು.ಎಲ್ಲೆಲ್ಲೂಅಶಾಂತಿ, ಗೊಂದಲ ಇರುವಇಂದು ಬಾಹುಬಲಿಯ ಸಂದೇಶಅತ್ಯಂತ ಪ್ರಸ್ತುತವಾಗಿದೆ.ಯಾವುದನ್ನೂಅತಿಯಾಗಿ ಮಾಡದೆ ಮಾಧ್ಯಸ್ಥ ಭಾವದಿಂದ ಶಾಂತಿ, ನೆಮ್ಮದಿಯಜೀವನ ಸಾಧ್ಯವಾಗುತ್ತದೆ.

ನಿಮ್ಮ ಮನೆಯಕಾರ್ಯಕ್ರಮವೆಂದೇ ಭಾವಿಸಿ ಎಲ್ಲರೂ ಸಕುಟುಂಬಿಕರಾಗಿ ಬರಬೇಕುಎಂದು ಆಮಂತ್ರಿಸಿದರು.ಪ್ರತಿ ದಿನ ಬಾಹುಬಲಿ ಬೆಟ್ಟ (ರತ್ನಗಿರಿಯಲ್ಲಿ) ದಲ್ಲಿ 15 ನಿಮಿಷ ಲೇಸರ್ ಶೋ ಮೂಲಕ ಬಾಹುಬಲಿಯಜೀವನಚಿತ್ರಣದ ಪ್ರದಸರ್ಶನ ನಡೆಯಲಿದೆಎಂದು ಹೇಳಿದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಮಸ್ತಕಾಭಿಷೇಕ ಸಮಿತಿಯ ಪ್ರದಾನ ಸಂಚಾಲಕ ಡಿ. ಸುರೇಂದ್ರಕುಮಾರ್ ಮತ್ತು ಸಂಚಾಲಕ ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು.

ಮುಖ್ಯಾಂಶಗಳು:
* ಹಗಲು ಮಾತ್ರ ಮಹಾಮಸ್ತಕಾಭಿಷೇಕ.
*  ರಾತ್ರಿಕೂಡರತ್ನಗಿರಿಗೆ ಮುಕ್ತ ಪ್ರವೇಶ.
*  ಲೇಶರ್ ಶೋ ಮೂಲಕ ಬಾಹುಬಲಿಯಜೀವನ ಸಂದೇಶ ಪ್ರಸಾರ.
* ಪಂಚಕಲ್ಯಾಣದ ಬದಲು ಪಂಚಮಹಾ ವೈಭವ-ದೃಶ್ಯರೂಪಕ ಪ್ರದರ್ಶನ.
*  ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು.
*  ಪ್ರತಿ ದಿನ ಅಪರಾಹ್ನಗಂಟೆ ೨ ರಿಂದ ೩ ರ ವರೆಗೆ ಮುನಿಗಳಿಂದ ಮಂಗಲ ಪ್ರವಚನ.
* ರಾಜ್ಯದಎಲ್ಲಾ ಕಡೆಗಳಿಂದ ವಿಶೇಷ ಬಸ್ ಸೌಲಭ್ಯ.
*  ಜನಮಂಗಳ ಯೋಜನೆಗಳ ಅನುಷ್ಠಾನ: ಜಲ ಮರುಪೂರಣ, ಕೆರೆಗಳ ಅಭಿವೃದ್ಧಿ.