- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಾತ್ಮ ಗಾಂಧೀಜಿಯವರ: ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ

Gandhi Stamp [1]

ಮಂಗಳೂರು : ಜಗತ್ತಿಗೆ ಅಹಿಂಸೆಯ ಸಂದೇಶವನ್ನು ನೀಡಿ ಜನಮಾನಸದಲ್ಲಿ ಅಮರರಾದ ಗಾಂಧೀಜಿಯವರು ಮಹಾತ್ಮ ಅನಿಸಿಕೊಂಡರು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಫೆಬ್ರವರಿ 23 ರಂದು ಅಪರಾಹ್ನ 2 ಗಂಟೆಗೆ ಮಹಾತ್ಮ ಗಾಂಧೀಜಿಯವರ ಮಂಗಳೂರು ಭೇಟಿಯ ಸ್ಮರಣಾರ್ಥ ಆಯೋಜಿಸಿದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವು ಭಾರತೀಯ ಅಂಚೆ ಇಲಾಖೆ ವತಿಯಿಂದ ಜ್ಞಾನೋದಯ ಸಮಾಜ ಮಂದಿರ, ಹೊೈಗೆ ಬಜಾರ್, ಮಂಗಳೂರಿನಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಹಾತ್ಮ ಗಾಂಧೀಯವರು ಅಂದಿನ ಕಾಲದಲ್ಲಿ ಮಂಗಳೂರಿಗೆ ಬಂದು ಉಳಿದುಕೊಂಡ ಸ್ಥಳದಲ್ಲೇ ಈ ದಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನನಗೆ ತುಂಬಾ ಸಂತೋಷ ತಂದಿದೆ.

ಪ್ರತಿಯೊಂದು ಅಂಚೆ ಲಕೋಟೆಯು ನೀತಿ ಸಂದೇಶವನ್ನು ಹೊಂದಿದ್ದು ಐತಿಹಾಸಿಕ ಮಹತ್ವದ ಸಂದರ್ಭಗಳನ್ನು ಸ್ಮರಿಸುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಂಚೆ ಇಲಾಖೆ ಆಯೋಜಿಸುತ್ತಿದೆ.

Gandhi Stamp [2]ಪೋಸ್ಟ್ ಮಾಸ್ಟರ್ ಜನರಲ್, ದಕ್ಷಿಣ ಕರ್ನಾಟಕ ವಲಯ ಎಸ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅವರು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ, 150ನೇಯ ಜನ್ಮದಿನದ ಪ್ರಯುಕ್ತ ಈ ವಿಶೇóಷ ಅಂಚೆ ಲಕೋಟೆಯನ್ನು ಒಂದು ಒಳ್ಳೆಯ ಉದ್ದೇಶದಲ್ಲಿ ಬಿಡುಗಡೆ ಮಾಡಿದ್ದೇವೆ ಮತ್ತು ಗಾಂಧೀಜಿಯವರ ವಕ್ತಿತ್ವದಲ್ಲಿ ಮೊದಲು ಕಾಣುವುದೇ ಅವರ ಸರಳತೆ; ಅದನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜ್ಞಾನೋದಯ ಸಮಾಜದ ಅಧ್ಯಕ್ಷರಾದ ಪ್ರೇಮಚಂದ್ರ ಕೆ ತಿಂಗಳಾಯ, ಪ್ರಸಿದ್ಧ ಫಿಲಾಟೆಲಿಸ್ಟ್ ಡಾ. ಈ.ಜಿ. ಲಕ್ಷ್ಮಣ ಪ್ರಭು, ಹಿರಿಯ ಅಂಚೆ ಅಧೀಕ್ಷಕರಾದ ಎಸ್.ಹರ್ಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.