- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿ.ಧನಂಜಯ್‌ಕುಮಾರ್ ಆತ್ಮನ ಸದ್ಗತಿಗಾಗಿ 504 ಕಲಶ ಅಭಿಷೇಕ 

Namana [1]ವೇಣೂರು  : ಮೃತರಆತ್ಮನಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಸಕಲ ದೋಷಗಳನ್ನು ಗೆದ್ದ ವೀತರಾಗ ಭಗವಂತನಿಗೆ ಬಸದಿಯಲ್ಲಿಅಭಿಷೇಕ ಮಾಡುತ್ತೇವೆ ಎಂದು ಮೂಡಬಿದ್ರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಬುಧವಾರ ವೇಣೂರಿನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿಇತ್ತೀಚೆಗೆ ಮೃತರಾದ ವಿ.ಧನಂಜಯ್‌ಕುಮಾರ್ ಅವರ ಆತ್ಮಶಾಂತಿಗಾಗಿ ನಡೆದ 504 ಕಲಶ ಅಭಿಷೇಕ ಮಾಡಿದ ಬಳಿಕ ಮಾತನಾಡಿದರು.

ವೇಣೂರು ಹಾಗೂ ಮೂಡಬಿದ್ರೆ ಪರಿಸರದ ಸರ್ವತೋಮುಖ ಪ್ರಗತಿಗೆ ಧನಂಜಯಕುಮಾರ್ ಶ್ರಮಿಸಿದ್ದರು. ರಾಷ್ಟ್ರರಾಜಕಾರಣದಲ್ಲಿ ಮಿಂಚಿದ ಅವರು ಎಲ್ಲರಿಗೂ ಆಪದ್ ಬಾಂಧವರಾಗಿದ್ದು ಹೃದಯ ಶ್ರೀಮಂತಿಕೆ ಹೊಂದಿದದೊಡ್ಡದಾನಿಯೂಆಗಿದ್ದರು.

ಶಾಸ್ತ್ರದಾನ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.

ವಿಜಯರಾಜಅಧಿಕಾರಿ ಮಾತನಾಡಿ, ಬಾಲ್ಯದಿಂದಲೆ ನಾಯಕತ್ವಗುಣ ಹೊಂದಿದ್ದಧನಂಜಯಕುಮಾರ್ ಪ್ರತಿಭಾವಂತರಾಗಿದ್ದು ವೇಣೂರಿಗೆ ಸರ್ಕಾರದ ಅನೇಕ ಯೋಜನೆಗಳನ್ನು ಮಂಜೂರು ಮಾಡಿದ್ದಾರೆಎಂದು ಹೇಳಿದರು.

ಅಖಿಲ ಭಾರತಜೈನ್ ಮಿಲನ್ ರಾಷ್ಟ್ರೀಯಅಧ್ಯಕ್ಷ ಡಿ. ಸುರೇಂದ್ರಕುಮಾರ್ ಮಾತನಾಡಿ ಸರಳ ವ್ಯಕ್ತಿತ್ವ ಹಾಗೂ ಆದರ್ಶ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಧನಂಜಯಕುಮಾರ್ ಬಿ.ಜೆ.ಪಿ.ವಕ್ತಾರರಾಗಿ, ಸಂಸದೀಯ ಪಟುವಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ರಾಷ್ಟ್ರಸಂತ ವಿದ್ಯಾನಂದ ಮುನಿಮಹಾರಾಜ್ ಮತ್ತು ಜ್ಞಾನಮತಿ ಮಾತಾಜಿಯ ವರಪರಮ ಭಕ್ತರೂ ಅವರು ಆಗಿದ್ದರು ಎಂದು ಹೇಳಿ ಸುರೇಂದ್ರಕುಮಾರ್ ನುಡಿನಮನ ಸಲ್ಲಿಸಿದರು.

ಮಾಜಿ ಸಚಿವ ಕೆ.ಅಭಯಚಂದ್ರಜೈನ್ ಮಾತನಾಡಿ, ಮೇರು ವ್ಯಕ್ತಿತ್ವ ಹೊಂದಿದ ಧನಂಜಯಕುಮಾರ್‌ ರಾಷ್ಟ್ರ ಮಟ್ಟದ ನಾಯಕನಾಗಿಬೆಳೆದು ವೇಣೂರಿಗೆ ಒಳ್ಳೆಯ ಕೀರ್ತಿತಂದಿದ್ದಾರೆ. ಅವರ ಕಾರ್ಯಶೈಲಿ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.

ಉಜಿರೆಯಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ ಧನಂಜಯಕುಮಾರ್ ಸಮಾಜ ಹಾಗೂ ಧರ್ಮಕ್ಕೆಅಮೂಲ್ಯಕೊಡುಗೆ ನೀಡಿದ್ದಾರೆ. ಅವರ ತತ್ವಗಳು, ಆದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಅಳದಂಗಡಿ ಅರಮನೆಯಡಾ.ಪದ್ಮಪ್ರಸಾದಅಜಿಲ, ಸುರತ್ಕಲ್‌ನ ಮಾಜಿ ಶಾಸಕ ಎಂ.ಎನ್. ಅಡ್ಯಂತಾಯ ನುಡಿನಮನ ಸಲ್ಲಿಸಿದರು.

ವಿ. ಜೀವಂಧರ್‌ಕುಮಾರ್ ಸ್ವಾಗತಿಸಿದರು.ಪವಿತ್ರ ವಿಕಾಸ್‌ಧನ್ಯವಾದವಿತ್ತರು.ಮಹಾವೀರಜೈನ್‌ಕಾರ್ಯಕ್ರಮ ನಿರ್ವಹಿಸಿದರು.

ಎಲ್. ಡಿ. ಬಳ್ಳಾಲ್ ಮಾಜಿ ಸಚಿವ ಬಿ.ರಮಾನಾಥರೈ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಕೆ.ಪ್ರತಾಪಸಿಂಹನಾಯಕ್, ಡಾ.ಎಂ.ಎನ್. ರಾಜೇಂದ್ರಕುಮಾರ್, ಕೆ.ಜಯವರ್ಮರಾಜ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು.