- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಿಜೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎನ್‌ಐಟಿಕೆ ಕ್ಯಾಂಪಸ್‌ ನಲ್ಲಿ ಸಂಭ್ರಮದ ಹೋಳಿ ಹಬ್ಬ

nitk-holi [1]ಸುರತ್ಕಲ್‌ :  ಎನ್‌ಐಟಿಕೆ ಕ್ಯಾಂಪಸ್‌ ನಲ್ಲಿ ಗುರುವಾರ ವಿದ್ಯಾರ್ಥಿಗಳು ಡಿಜೆ ಹಾಡಿಗೆ ಹೆಜ್ಜೆ ಹಾಕುವ ಮೂಲಕ, ಪರಸ್ಪರ ಬಣ್ಣ ಹಂಚಿಕೊಂಡು ಹೋಳಿ ಹಬ್ಬದ ಶುಭಾಶಯ ಕೋರಿದರು. ಜಾತಿ-ಭೇದ ಮರೆತು ಸಂತಸ ಎಲ್ಲೆಡೆ ಹೊಮ್ಮಿಸುವ ಈ ಹಬ್ಬವನ್ನು ಇಲ್ಲಿ ದೇಶ -ವಿದೇಶದ ನೂರಾರು ಸಂಖ್ಯೆಯ ಯುವಕ ಯುವತಿಯರು ಒಟ್ಟಿಗೆ ಆಚರಿಸಿದರು.

ಕೆಡುಕಿನ ವಿರುದ್ಧ ಒಳಿತಿಗೆ ಜಯವಾದ ದಿನವನ್ನು ಹೋಳಿ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ರಂಗಿನ ಹಬ್ಬವನ್ನು ಪ್ರೀತಿ ಪ್ರೇಮದ ದ್ಯೋತಕ ಎಂದು ಭಾವಿಸಲಾಗುತ್ತದೆ. ಶತಮಾನಗಳ ಹಿಂದಿನಿಂದಲೂ ಆಚರಣೆಯನ್ನು ಹೋಳಿ ಬರ ಬರುತ್ತಾ ಆಚರಣೆಯಲ್ಲಿ ಬದಲಾವಣೆ ಕಂಡಿತು. ಹಿಂದೂಗಳ ಆಚರಣೆಯಾಗಿ ಆರಂಭವಾದ ಹೋಳಿ ಇಂದು ಎಲ್ಲ ಜಾತಿಯವರು ಜಾಗತಿಕವಾಗಿ ಆಚರಿಸುತ್ತಾರೆ.