- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್ ಮುಖಂಡ ಪೂಜಾರಿ ಕಾಲಿಗೆ ಬಿದ್ದು, ಕಣಕ್ಕೆ ಇಳಿದ ನಳಿನ್ ಕುಮಾರ್ ಕಟೀಲ್

nalin poojary [1]ಮಂಗಳೂರು:  ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಿರಿಯ ಕಾಂಗ್ರೆಸ್ ‌ಮುಖಂಡ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಅವರ ಆಶೀರ್ವಾದ  ಪಡೆದು ಭಾನುವಾರ ಚುನಾವಣಾ ಪ್ರಚಾರಕ್ಕಿಳಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದ ನಳಿನ್, ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾರಿ ಆಶೀರ್ವಾದ ಪಡೆದ ನಳಿನ್, ಬಳಿಕ ಪೂಜಾರಿ ಅವರ ಜೊತೆ ‌ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದ್ದಾರೆ.

ನಳಿನ್ ‌ಕುಮಾರ್ ಗೆ ಆಶೀರ್ವಾದ ಮಾಡಿದ ಬಳಿಕ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ನಳಿನ್ ಕುಮಾರ್ ‌ಕಟೀಲ್ ಗೆ ದೇವರು ಒಳ್ಳೆಯದು ಮಾಡ್ತಾರೆ. ಕಾಂಗ್ರೆಸ್ ನ ಮಿಥುನ್ ರೈ ಒಳ್ಳೆಯ ಅಭ್ಯರ್ಥಿ, ಆದರೆ ಕಾಂಗ್ರೆಸ್ ಗೆ ಈಗ ಪರಿಸ್ಥಿತಿ ಒಳ್ಳೆಯದಿಲ್ಲ. ಇನ್ನು ಎರಡು ಎಲೆಕ್ಷನ್ ಗೆ ಮೋದಿಯವರೇ ಬರ್ತಾರೆ,‌ ಮತ್ಯಾರು ಬರಲ್ಲ. ಇಡೀ ದೇಶದಲ್ಲೇ ಮೋದಿ ಬರ್ತಾರೆ.  ಅಲ್ಲದೇ ಹೈಕಮಾಂಡ್ ಹೇಳಿದ್ರೆ ದ.ಕ ಜಿಲ್ಲೆಯ ‌ಕಾಂಗ್ರೆಸ್ ಅಭ್ಯರ್ಥಿ ‌ಪರ ಪ್ರಚಾರಕ್ಕೆ ಹೋಗ್ತೇನೆ, ಹೈಕಮಾಂಡ್ ನಿರ್ದೇಶನ ಕೊಟ್ರೆ ಹೋಗದೇ ಇರಲು ಆಗಲ್ಲ. ದ.ಕ ಜಿಲ್ಲೆಯಲ್ಲಿ ‌ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ‌ಕೊಡಬೇಕು ಅಂತ ಮಿಥುನ್ ಗೆ ಕೊಟ್ಟಿದ್ದಾರೆ. ಆದರೆ ಎರಡು‌ ಎಲೆಕ್ಷನ್ ಗೆ ಇಲ್ಲಿ ಯಾರೂ ಗೆಲ್ಲಲ್ಲ. ಮೋದಿಯವರಿಗೆ ಅವರ ಅಭಿವೃದ್ಧಿಯೇ ಪ್ಲಸ್ ಪಾಯಿಂಟ್ ಎಂದರು.

ನಳಿನ್ ‌ಕುಮಾರ್ ಮಾತನಾಡಿ, ಜನಾರ್ದನ ಪೂಜಾರಿ ನಮ್ಮಂಥವರಿಗೆ ಆದರ್ಶ ವ್ಯಕ್ತಿ. ಭ್ರಷ್ಟಾಚಾರ ರಹಿತವಾದ ನೇರ ನಡೆ ನುಡಿಯ ರಾಜಕಾರಣಿ. ಜನಾರ್ದನ ಪೂಜಾರಿಯನ್ನು ನಾನು ಬಹಳ ಗೌರವದಿಂದ ಕಂಡವ. 2009ರ ಚುನಾವಣೆ ವೇಳೆ ಅವರ ವಿರುದ್ದ ಸ್ಪರ್ಧಿಸಿದ್ರೂ ಅವರ ಆಶೀರ್ವಾದ ಪಡೆದಿದ್ದೆ. ಆವತ್ತು ಕೂಡ ಅವರು ಅಭ್ಯರ್ಥಿ ಆಗಿದ್ರೂ ನನಗೆ ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿದ್ರು. ಇವತ್ತು ಕೂಡ ಒಳ್ಳೆಯದಾಗಲಿ ಅಂತ ಸಂಪೂರ್ಣ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ. ಎರಡು ಬಾರಿ ಅವರ ಆಶೀರ್ವಾದದಿಂದ ಗೆದ್ದಿದ್ದೇನೆ, ಮೂರನೇ ಬಾರಿ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ಹೇಳಿದರು.

ಒಳ್ಳೆಯ  ಆದರ್ಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಅವರು ನನಗೆ ರಾಜಕೀಯ ಗುರುಗಳು. ಒಂದು ಕಡೆಯಿಂದ ದೇವರ ಆಶೀರ್ವಾದ, ಇನ್ನೊಂದು ಕಡೆ ನಾರಾಯಣ ಗುರು ಮತ್ತು ಜನಾರ್ದನ ಪೂಜಾರಿ ಆಶೀರ್ವಾದ. ಇದನ್ನ ಪಡೆದು ಇವತ್ತಿನಿಂದಲೇ ನಾನು ಕಣಕ್ಕೆ ಇಳಿಯುತ್ತಿದ್ದೇನೆ ಎಂದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಹರಿಕೃಷ್ಣ ಬಂಟ್ವಾಳ್ ಜೊತೆಗಿದ್ದರು.

ನಾಳೆ ನಾಮ ಪಾತ್ರ 

ಸೋಮವಾರ ಬೆಳಿಗ್ಗೆ9 ಗಂಟೆಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್ ನಿಂದ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ.