ಮಂಗಳೂರು : ವೆಬ್ ಸೈಟ್ ಮೂಲಕ ಹೈಪೈ ವೇಶ್ಯಾ- ವಾಟಿಕೆ ಜಾಲ ಪತ್ತೆ – ಇಬ್ಬರ ಬಂಧನ

4:57 PM, Wednesday, April 3rd, 2019
Share
1 Star2 Stars3 Stars4 Stars5 Stars
(No Ratings Yet)
Loading...

Ivan ಮಂಗಳೂರು  :  ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ನಿರೀಕ್ಷಕರಿಗೆ ನಂತೂರು ಜಂಕ್ಷನ್ ಬಳಿ ಇರುವ ಸ್ಟಾರ್ ಲಿಜೆಸಿ ಅಪಾರ್ಟ್ ಮೆಂಟ್ ನ ಜಿ-1ರಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಇಟ್ಟುಕೊಂಡು ಲೊಕ್ಯಾಂಟೋ ವೆಬ್ ಸೈಟ್ ಮುಖಾಂತರ ಮಹಿಳೆಯರ ಪೋಟೋ ವನ್ನು ಅಫ್ಲೋಡ್ ಮಾಡಿ ಗಿರಾಕಿಗಳನ್ನು ಆಹ್ವಾನಿಸಿ ಹೈಪೈ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸದ್ರಿ ಅಪಾರ್ಟ್ ಮೆಂಟ್ ಗೆ ಧಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತಿದ್ದ ಇಬ್ಬರು ಪಿಂಪ್ ಗಳನ್ನು ಸೋಮವಾರ ದಸ್ತಗಿರಿ ಮಾಡಿ  ನೊಂದ 3 ಮಹಿಳೆಯರನ್ನು ರಕ್ಷಿಸಿದ್ದಾರೆ

ಐವನ್ ಸಿರಿಲ್ ಪಿಂಟೊ@ ಪವನ್ ( 35) ಮೊಡಂಕಾಪು ಬಂಟ್ವಾಳ ತಾಲೂಕು, ಸತೀಶ್ ಆಚಾರ್ಯ (31) ಯೆಯ್ಯಾಡಿ ಮಂಗಳೂರು ಬಂಧಿತ ಆರೋಪಿಗಳು.

ಆರೋಪಿಗಳ ವಶದಲ್ಲಿದ್ದ 23,500/- ರೂ ಮತ್ತು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ.ಕೆ., ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English