ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಭೂಗತ ಪಾತಾಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶ್ ಭವನ ಶರಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ಮೇಲೆ ಲೈಂಗಿಕ ಕಿರುಕುಳ, ಕೊಲೆ, ಅತ್ಯಾಚಾರ, ಸುಲಿಗೆ,ಬ್ಲ್ಯಾಕ್ಮೈಲ್ ಸೇರಿದಂತೆ 18ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ಈತ ಕಳೆದ ಕೆಲವು ತಿಂಗಳುಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕೆಲವು ಸಮಯಗಳಿಂದ ಜೈಲಿನಲ್ಲಿದ್ದ ಶರಣ್ ಜೈಲಿನಿಂದ ಹೊರಬಂದ ಬಳಿಕ ಯುವತಿ ಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿತ್ತು. ಹುಲಿವೇಷ ಕುಣಿತದ ತರಬೇತಿ ಸಂದರ್ಭದಲ್ಲಿ ತನ್ನ ಮೇಲೆ ಶರಣ್ ಅತ್ಯಾಚಾರ ನಡೆಸಿರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಈ ಘಟನೆ ಬಳಿಕ ಶರಣ್ ನಾಪತ್ತೆಯಾಗಿದ್ದ. ಇದೀಗ ಶರಣ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English