- Mega Media News Kannada - https://kannada.megamedianews.com -

ಪಂಚಾಯತ್ ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ವಿದ್ಯಾರ್ಥಿಗಳ ಮೃತ್ಯು

Putturu Water tank [1]ಪುತ್ತೂರು: ನೀರಿನಲ್ಲಿ ಆಟವಾಡಲೆಂದು ಪಂಚಾಯತ್ ನ ನೀರು ಸರಬರಾಜು ಟ್ಯಾಂಕಿಗೆ ಇಳಿದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಪಾಣಾಜೆ ಸಮೀಪದ ಉಡ್ಡಂಗಳ ಎಂಬಲ್ಲಿ ನಡೆದಿದೆ.

ಸಾವಿಗೀಡಾದ ಮಕ್ಕಳನ್ನು ವಿಶ್ಮಿತಾ (13), ಚೈತ್ರಾ (10) ಹಾಗೂ ಜಿತೇಶ್ (13) ಎಂದು ಗುರುತಿಸಲಾಗಿದೆ.

ಮೃತಪಟ್ಟ ಮಕ್ಕಳೆಲ್ಲಾ ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಹಿನ್ನಲೆಯಲ್ಲಿ ಆಟವಾಡಲು ತೆರಳಿದ್ದರು ಎಂದು ಹೇಳಲಾಗಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೋಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.