- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನ

Control-room [1]ಮಂಗಳೂರು  : ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನವಾಗಿದೆ.

ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಬೆಳ್ತಂಗಡಿಯಲ್ಲಿ ಶೇ.80.92, ಮೂಡಬಿದ್ರೆ ಶೇ.73.17, ಬಂಟ್ವಾಳ ಶೇ. 80.31, ಪುತ್ತೂರು ಶೇ.80.71 ಸುಳ್ಯ ಶೇ.84.10, ಮಂಗಳೂರು ಉತ್ತರ ( ಸುರತ್ಕಲ್) ಶೇ.74.83, ಮಂಗಳೂರು ದಕ್ಷಿಣ ಶೇ. 69.15 ಹಾಗೂ ಮಂಗಳೂರು (ಉಳ್ಳಾಲ) ಶೇ.75.62 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 76.67 ಮತದಾನದೊಂದಿಗೆ ಸಾರ್ವಕಾಲಿಕ ಮತದಾನ ಎಂಬ ಹೆಗ್ಗಳಿಕೆ ಪಡೆದಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 74.46 ಮತದಾನದೊಂದಿಗೆ ಕರ್ನಾಟಕದಲ್ಲೇ ಅತ್ಯಧಿಕ ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆ ಕಾರಣವಾಗಿತ್ತು.

2018 ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 77.63 ಮತದಾನವಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.78 ಮತದಾನವಾಗಿತ್ತು.

voting [2]